ಶ್ರಮದಾಯಕ ಕೃಷಿಯಿಂದ ಯಶಸ್ಸು

farming
ಹೆಬ್ರಿಯ ಚಾರ ಹಂದಿಕಲ್ಲು ಶಾಲೆಯ ವಠಾರದಲ್ಲಿ ಶುಕ್ರವಾರ ಸಮಗ್ರ ಕೃಷಿ ಮಾಹಿತಿ ಕಾರ್ಯಕ್ರಮವನ್ನು ಉದ್ಯಮಿ ಸಂತೆಕಟ್ಟೆ ರಾಮಕಾಂತ್ ಕಾಮತ್ ಉದ್ಘಾಟಿಸಿದರು
Published on

ಹೆಬ್ರಿ: ಅರಿತು ಶ್ರಮವಹಿಸಿ ಕೃಷಿ ಮಾಡಿದರೆ ಯಶಸ್ಸು ಸಾಧ್ಯ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಹೇಳಿದರು.
ಹೆಬ್ರಿಯ ಚಾರ ಹಂದಿಕಲ್ಲು ಶಾಲೆಯ ವಠಾರದಲ್ಲಿ ಚಾರ ವಿವೇಕಾನಂದ ಯುವ ವೇದಿಕೆ ವತಿಯಿಂದ ಉಡುಪಿ ಜಿಲ್ಲಾ ಕೃಷಿಕ ಸಂಘದ ಸಹಕಾರದಲ್ಲಿ ಶುಕ್ರವಾರ ಸಮಗ್ರ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮ ಸಂಘಟಕ ಪ್ರಗತಿಪರ ಯುವ ಕೃಷಿಕ ಚಾರ ಬಾವಿಗದ್ದೆ ಮಿಥುನ್ ಶೆಟ್ಟಿ, ಉದ್ಯಮಿ ಸಂತೆಕಟ್ಟೆ ರಾಮಕಾಂತ್ ಕಾಮತ್, ಚಾರ ಪಂಚಾಯಿತಿ ಅಧ್ಯಕ್ಷ ದಿನೇಶ ಶೆಟ್ಟಿ, ವಿವೇಕಾನಂದ ಯುವ ವೇದಿಕೆ ಅಧ್ಯಕ್ಷ ಅಶೋಕ ನಾಯ್ಕ, ಶ್ರೀಕ್ಷೇತ್ರ ಜೋಮ್ಲು ಸಮಿತಿ ಅಧ್ಯಕ್ಷ ರವೀಂದ್ರನಾಥ ಶೆಟ್ಟಿ, ಯುವ ರೈತ ರಾಜೇಶ ಪೂಜಾರಿ, ದಯಾನಂದ, ಕುಚ್ಚೂರು ರಾಜೀವ ಶೆಟ್ಟಿ, ರತ್ನಾಕರ ಶೆಟ್ಟಿ ಕೆರೆಬೆಟ್ಟು, ಸುಗ್ಗಿ ಸುಧಾಕರ ಶೆಟ್ಟಿ ಕರ್ಜೆ ಹಾಗೂ ಅಡಕೆ ಬೆಳೆಗಾರ ರೈತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net