ರೋಗ ನಿರ್ವಹಣೆ ಕುರಿತು ಮಾಹಿತಿ

IMG20250207205511.jpg
Published on

ಬೆಳಗಾವಿ: ಡಾ. ಕೆ.ಎಚ್. ಪಾಟೀಲ ಪ್ರಾಧ್ಯಾಪಕ ಪೀಠ ಅಗ್ರಿಕಲ್ಚರಲ್ ಮಾರ್ಕೆಟಿಂಗ್ ಎಬಿಎಂ ವಿಭಾಗ, ಧಾರವಾಡ ಕೃಷಿ ವಿಶ್ವವಿದ್ಯಾಲಯ, ಬೆಂಗಳೂರಿನ ಕರ್ನಾಟಕ ರಾಜ್ಯ ಅಗ್ರಿಕಲ್ಚರಲ್ ಮಾರ್ಕೆಟಿಂಗ್ ಬೋರ್ಡ್ ಹಾಗೂ ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ‘ಕಡಲೆ ಉತ್ಪಾದನೆ, ಮಾರುಕಟ್ಟೆ ಮತ್ತು ಮೌಲ್ಯವರ್ಧನೆ’ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.

ಕೃಷಿ ವಿವಿ ಕೃಷಿ ವಿಸ್ತರಣಾ ಪ್ರಾಧ್ಯಾಪಕ ಡಾ. ಜಿ.ಎನ್.ಮರಡ್ಡಿ ಕಾರ್ಯಕ್ರಮ ಉದ್ಘಾಟಿಸಿ, ಕಡಲೆ ಉತ್ಪಾದನೆಯ ಮಹತ್ವ, ಮಾರುಕಟ್ಟೆ ಮತ್ತು ಪ್ರಸ್ತುತ ಸನ್ನಿವೇಶದಲ್ಲಿ ಮೌಲ್ಯವರ್ಧನೆ ಅಂಶಗಳನ್ನು ತಿಳಿಸಿದರು. ಸುಧಾರಿತ ತಳಿಗಳು, ಜೈವಿಕ ಗೊಬ್ಬರಗಳಾದ ಪಿಎಸ್‌ಬಿ, ರೈಜೋಬಿಯಂ ಮತ್ತು ಟ್ರೈಕೋಡರ್ಮಾ, ಬೀಜ ಸಂಸ್ಕರಣೆ ಮತ್ತು ಕೀಟ ಮತ್ತು ರೋಗ ನಿರ್ವಹಣೆ, ಕೃಷಿಯಲ್ಲಿ ಕಡಿಮೆ ವೆಚ್ಚದ ತಂತ್ರಜ್ಞಾನ ಕುರಿತು ವಿವರಿಸಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಮಂಜುನಾಥ ಚೌರಡ್ಡಿ, ಕಡಲೆ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಅಂಶಗಳ ಮಹತ್ವ ತಿಳಿಸಿದರು.

ಡಾ. ಡಿ.ಎಚ್. ಮಿತ್ರಣ್ಣವರ, ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ಪಡೆಯುವ ಸಲುವಾಗಿ ಕಡಲೆಯ ಮಾರುಕಟ್ಟೆ ಮತ್ತು ಮೌಲ್ಯವರ್ಧನೆಯ ತಂತ್ರಜ್ಞಾನಗಳು, ವಿಧಾನಗಳ ಬಗ್ಗೆ ವಿವರಿಸಿದರು. ಡಾ. ಎನ್.ಎಂ. ಕೆರೂರು ಸ್ವಾಗತಿಸಿದರು. ಪ್ರವೀಣ ಯಡಹಳ್ಳಿ ನಿರೂಪಿಸಿದರು. ಡಾ. ಬಸವರಾಜ ಕುಲಕರ್ಣಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net