ವಿದ್ಯಾರ್ಥಿಗಳಿಗೆ ಕೇಂದ್ರದ ಉದ್ಯೋಗಾವಕಾಶ ಮಾಹಿತಿ

25 Jaggu 6
ಬೆಳಗಾವಿ ರಾಜಾ ಲಖಮಗೌಡ ವಿಜ್ಞಾನ ಕಾಲೇಜಿನ ಸಿ.ವಿ. ರಾಮನ್​ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ "ಕೇಂದ್ರ ಸರ್ಕಾರದಲ್ಲಿನ ಉದ್ಯೋಗಾವಕಾಶಗಳು' ವಿಷಯದ ಕಾರ್ಯಾಗಾರದಲ್ಲಿ ಬೆಳಗಾವಿಯ ನವದಿಶಾ ಅಕಾಡೆಮಿ ಸಂಸ್ಥಾಪಕ ಪ್ರವಿಣ ಮಾತನಾಡಿದರು. ಡಾ.ಜ್ಯೋತಿ ಕವಳೇಕರ, ಅಜಿತ ಸುತಾರ, ಡಾ.ವಿಜಯಲಕ್ಷಿ$್ಮ ಪಾಟೀಲ ಇತರರಿದ್ದರು.
Published on

ಬೆಳಗಾವಿ: ನಗರದ ಕೆಎಲ್​ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಕಾಲೇಜಿನ ಗಣಿತಶಾಸ ಮತ್ತು ಸಂಖ್ಯಾಶಾಸ ವಿಭಾಗಗಳ ವತಿಯಿಂದ ಕೇಂದ್ರ ಸರ್ಕಾರದಲ್ಲಿನ ಉದ್ಯೋಗಾವಕಾಶ ಎಂಬ ವಿಷಯದ ಕುರಿತು ಕಾಲೇಜಿನ ಸರ್​ ಸಿ.ವಿ. ರಾಮನ್​ ಸಭಾಂಗಣದಲ್ಲಿ ಶುಕ್ರವಾರ ಕಾರ್ಯಾಗಾರ ನಡೆಯಿತು.

ಬೆಳಗಾವಿಯ ನವದಿಶಾ ಅಕಾಡೆಮಿ ಸಂಸ್ಥಾಪಕ ಪ್ರವಿಣ ಅತಿಥಿಯಾಗಿ ಆಗಮಿಸಿ ಕೇಂದ್ರ ಸರ್ಕಾರದಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳ ಮಾಹಿತಿ ನೀಡಿದರು. ಆ ಉದ್ಯೋಗಗಳಿಗೆ ಆಯ್ಕೆಯಾಗಿ ಮಾಡಬೇಕಾದ ಅಧ್ಯಯನದ ವಿಷಯ ಮತ್ತು ತಯಾರಿಗಳ ಕುರಿತು ವಿವರಿಸಿದರು.

ಪ್ರಾಚಾಯೆರ್ ಡಾ.ಜ್ಯೋತಿ ಕವಳೇಕರ ಅಧ್ಯಕ್ಷತೆ ವಹಿಸಿದ್ದರು. ಸಂಖ್ಯಾಶಾಸ ವಿಭಾಗದ ಮುಖ್ಯಸ್ಥೆ ಅಜಿತ್​ ಸುತಾರ ಸ್ವಾಗತಿಸಿದರು. ಗಣಿತಶಾಸ ವಿಭಾಗದ ಮುಖ್ಯಸ್ಥೆ ಸುಧಾ ಸರೀಕರ ಪರಿಚಯಿಸಿದರು. ಉಪನ್ಯಾಸಕಿ ರೇಖಾ ಚವ್ಹಾಣ ವಂದಿಸಿದರು. ಗಣಿತಶಾಸ ಸಂದ ಅಧ್ಯಕ್ಷೆ ಡಾ.ವಿಜಯಲಕ್ಷಿ$್ಮ ಪಾಟೀಲ ಉಪಸ್ಥಿತರಿದ್ದರು. ಕಿರಣ ಸುನತರಕರ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು. 90ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net