ವಿದ್ಯಾರ್ಥಿಗಳಿಗೆ ಕೇಂದ್ರದ ಉದ್ಯೋಗಾವಕಾಶ ಮಾಹಿತಿ

28 Jaggu 6
ಬೆಳಗಾವಿ ರಾಜಾ ಲಖಮಗೌಡ ವಿಜ್ಞಾನ ಕಾಲೇಜಿನ ಸಿ.ವಿ. ರಾಮನ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕೇಂದ್ರ ಸರ್ಕಾರದಲ್ಲಿನ ಉದ್ಯೋಗಾವಕಾಶಗಳು’ ವಿಷಯದ ಕಾರ್ಯಾಗಾರದಲ್ಲಿ ಬೆಳಗಾವಿಯ ನವದಿಶಾ ಅಕಾಡೆಮಿ ಸಂಸ್ಥಾಪಕ ಪ್ರವೀಣ ಮಾತನಾಡಿದರು. ಡಾ.ಜ್ಯೋತಿ ಕವಳೇಕರ, ಅಜಿತ ಸುತಾರ, ಡಾ.ವಿಜಯಲಕ್ಷ್ಮೀ ಪಾಟೀಲ ಇತರರಿದ್ದರು.
Published on

ಬೆಳಗಾವಿ: ನಗರದ ಕೆಎಲ್‌ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಕಾಲೇಜಿನ ಗಣಿತಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ವಿಭಾಗಗಳ ವತಿಯಿಂದ ಕೇಂದ್ರ ಸರ್ಕಾರದಲ್ಲಿನ ಉದ್ಯೋಗಾವಕಾಶ ಎಂಬ ವಿಷಯದ ಕುರಿತು ಕಾಲೇಜಿನ ಸರ್ ಸಿ.ವಿ. ರಾಮನ್ ಸಭಾಂಗಣದಲ್ಲಿ ಶುಕ್ರವಾರ ಕಾರ್ಯಾಗಾರ ನಡೆಯಿತು.

ಬೆಳಗಾವಿಯ ನವದಿಶಾ ಅಕಾಡೆಮಿ ಸಂಸ್ಥಾಪಕ ಪ್ರವೀಣ ಅತಿಥಿಯಾಗಿ ಆಗಮಿಸಿ ಕೇಂದ್ರ ಸರ್ಕಾರದಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳ ಮಾಹಿತಿ ನೀಡಿದರು. ಆ ಉದ್ಯೋಗಗಳಿಗೆ ಆಯ್ಕೆಯಾಗಿ ಮಾಡಬೇಕಾದ ಅಧ್ಯಯನದ ವಿಷಯ ಮತ್ತು ತಯಾರಿಗಳ ಕುರಿತು ವಿವರಿಸಿದರು.

ಪ್ರಾಚಾರ್ಯೆ ಡಾ.ಜ್ಯೋತಿ ಕವಳೇಕರ ಅಧ್ಯಕ್ಷತೆ ವಹಿಸಿದ್ದರು. ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥೆ ಅಜಿತ್ ಸುತಾರ ಸ್ವಾಗತಿಸಿದರು. ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುಧಾ ಸರೀಕರ ಪರಿಚಯಿಸಿದರು. ಉಪನ್ಯಾಸಕಿ ರೇಖಾ ಚವ್ಹಾಣ ವಂದಿಸಿದರು. ಗಣಿತಶಾಸ್ತ್ರ ಸಂಘದ ಅಧ್ಯಕ್ಷೆ ಡಾ.ವಿಜಯಲಕ್ಷ್ಮೀ ಪಾಟೀಲ ಉಪಸ್ಥಿತರಿದ್ದರು. ಕಿರಣ ಸುನತರಕರ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು. 90ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net