ಸಹಕಾರ ಚಳವಳಿ ಬಗ್ಗೆ ಸೈನಿಕ ಶಾಲೆ ಮಕ್ಕಳಿಗೆ ಮಾಹಿತಿ

Information about co-operation movement to the soldiers school children
Published on

ಕುಶಾಲನಗರ:

ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಶನಿವಾರ ಭೇಟಿ ನೀಡಿ ಸಹಕಾರ ಸಂಘದ ವಿಷಯಗಳ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ವಿದ್ಯಾರ್ಥಿಗಳೊಂದಿಗೆ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಸಂವಾದ ನಡೆಸುತ್ತಾ ಸಹಕಾರ ಸಂಘದ ರಚನೆ, ಅದರ ಬೆಳವಣಿಗೆ, ರೈತರ ಅಭಿವೃದ್ಧಿಗಾಗಿ ರೈತ ಸದಸ್ಯರ ಹಣದ ಮೂಲಕ ಆರಂಭ ಮಾಡಿ ಅದರ ಮೂಲಕ ಸಹಕಾರ ಸಂಘದ ಆಡಳಿತ ಮಂಡಳಿ ರೈತರ ಅಭಿವೃದ್ಧಿಗೆ ಪೂರಕವಾಗಿ ತಿಂಗಳಿಗೊಮ್ಮೆ ಸಭೆ ನಡೆಸಿ ಅದರ ಮೂಲಕ ಸಹಕಾರ ಕಾಯ್ದೆಯ ಅನುಗುಣವಾಗಿ ಸಾಲ ಸೌಲಭ್ಯಗಳನ್ನು ರೈತರಿಗೆ ನೀಡುವ ಮುಖೇನ ಅವರನ್ನು ಆರ್ಥಿಕವಾಗಿ ಮುಂದುವರೆಯಲು ಸಹಕಾರ ಸಂಘಗಳು ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತವೆ ಎಂದು ಮಾಹಿತಿ ನೀಡಿದರು.
ವಿದ್ಯಾರ್ಥಿಗಳು ಸಹಕಾರ ಸಂಘಗಳ ಮೂಲಕ ಜಮೀನಿನ ದಾಖಲೆ ಅಧಾರದ ಮೇಲೆ, ಮತ್ತು ಯಾವ ಯಾವ ರೀತಿಯ ಬಡ್ಡಿ ದರಗಳು, ಸಾಲ ನೀಡುವಿಕೆ ಬಗ್ಗೆ, ಸಾಲ ಮರುಪಾವತಿ ಬಗ್ಗೆ ಸಂವಾದದಲ್ಲಿ ಕೇಳಿದ ವಿಷಯಗಳಿಗೆ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಸಹಕಾರ ಸಂಘಗಳ ಆರಂಭಿಸುವಿಕೆಯ ಉದ್ದೇಶ, ಅದರಿಂದಾಗಿ ರೈತರಿಗೆ ಆಗುವ ಅನುಕೂಲಗಳ ಬಗ್ಗೆ ಸವಿಸ್ತಾರವಾದ ಮಾಹಿತಿ, ಕೃಷಿ ಸಾಲ, ಸೇರಿದಂತೆ ಹೈನುಗಾರಿಕೆ, ತೋಟಗಾರಿಕೆಗೆ ವಿವಿಧ ಸಾಲ ಸೌಲಭ್ಯಗಳ ಬಗ್ಗೆ ರೈತರಿಗೆ ನೀಡುವ ಯಶಸ್ವಿನಿ ಯೋಜನೆ ಸೇರಿದಂತೆ ಸಹಕಾರ ಸಂಘದ ಅಡಿಯಲ್ಲಿ ಬರುವ ಯೋಜನೆಗಳ ಬಗ್ಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೂಡಿಗೆ ಡೈರಿಗೆ ಭೇಟಿ, ಮತ್ತು ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಶಿಕ್ಷಣದ ಭೋದನೆಯ ಜೊತೆಗೆ ಪ್ರಾಯೋಗಿಕವಾಗಿ ವಿಷಯಗಳ ಬಗ್ಗೆ ಅರಿತುಕೊಂಡರು.
ಸಹಕಾರ ಸಂಘದ ನಿರ್ದೇಶಕಿ ಜಯಶ್ರೀ, ಕೆ. ಬಿ. ರಾಮಚಂದ್ರ ಕೆ.ಪಿ.ರಾಜು, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ. ಮೀನಾ, ಸೈನಿಕ ಶಾಲೆಯ ಶಿಕ್ಷಕರಾದ ರಾಘವೇಂದ್ರ ರಾಜ್ ಅರಸ್, ವೆಂಕಟರಾಮಣ್ಣ, ಆಶೋಕನ್, ಮಹತೇಶ್, ಸುವಿತ್ ಮಹಾಲಕ್ಷಿ, ಪಾರ್ವತಿ, ಸುಬ್ಬರಂಗಯ್ಯ, ಸಂಘದ ಸಿಬ್ಬಂದಿ ವರ್ಗ, ಮತ್ತು ಸೈನಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net