

ಹೆಣ್ಣು ದುಂಬಿಗಳು ಕಾಂಡದ ಮೇಲಿನ ಹಾನಿಯಾಗಿರುವ ಸ್ಥಳದಲ್ಲಿ ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆಗಳಿಂದ ಹೊರ ಬಂದ ಮರಿಹುಳುಗಳು ಕಾಂಡವನ್ನು ಕೊರೆದು, ಕಾಂಡದ ಒಳಭಾಗವನ್ನು ತಿನ್ನುತ್ತವೆ. ಅಂತಹ ಜಾಗದಲ್ಲಿ ದ್ರವ ಸೋರುತ್ತಿರುತ್ತದೆ. ಹೆಚ್ಚಿನ ಹಾನಿಯಾದಲ್ಲಿ ಮರ ಗಾಳಿಯ ರಭಸಕ್ಕೆ ಮುರಿಯುವ ಸಾಧ್ಯತೆ ಇರುತ್ತದೆ.
ನಿರ್ವಹಣೆ: ಕಾಂಡದ ಭಾಗದಲ್ಲಿ ಯಾವುದೇ ತರಹದ ಹಾನಿಯಾಗದಂತೆ ಮುನ್ನಚ್ಚರಿಕೆ ಕ್ರಮಗಳನ್ನು ವಹಿಸಬೇಕು. ರಸ ಸೋರುತ್ತಿರುವ ಕಡೆ ಸ್ವಚ್ಛ ಮಾಡಿ ಸಣ್ಣ ರಂಧ್ರ ಕೊರೆದು ಅದಕ್ಕೆ ಫೆನ್ವಾಲೆರೇಟ್ ಮಣ್ಣಿನ (1:3) ಜತೆಗೆ ಸೇರಿಸುವುದು. ಗಾಯಗಳಲ್ಲಿ ಕೀಟವು ಮೊಟ್ಟೆಗಳನ್ನು ಇಡುವುದರಿಂದ ಕಾಂಡಕ್ಕೆ ಗಾಯವಾಗುವುದನ್ನು ತಪ್ಪಿಸಬೇಕು. ಎಕರೆಗೆ ಒಂದು ಆಕರ್ಷಕ ಬಲೆಯನ್ನು ಬಳಸಿ ದುಂಬಿಗಳನ್ನು ಅಕರ್ಷಿಸುವುದು (ಹುಳಿ ಬಂದ ಕಬ್ಬಿನರಸ + ಅಸೆಟಿಕ್ ಆಮ್ಲ + ತೆಂಗಿನ ಗರಿಗಳ ದಂಟು + ಈಸ್ಟ್) ಅಥವಾ 10 ತೆಂಗಿನ ಮರಗಳಿಗೆ ಒಂದರಂತೆ ಆರ್ಪಿಡಬು್ಲ್ಯ ಆಕರ್ಷಕ ಬಲೆಯನ್ನು ಕಟ್ಟಿ, ಅದರಲ್ಲಿ ಬಿದ್ದಂತಹ ದುಂಬಿಗಳನ್ನು ಸಾಯಿಸುವುದು.
| ಡಾ. ಶಿವಣ್ಣ ಬಿ ಕೀಟಶಾಸ್ರ ತಜ್ಞರು
| ಫವಾಜ್ ತುಮಕೂರು
ಮಾಗಿದ ಹಣ್ಣುಗಳಲ್ಲಿ ಕಪ್ಪು ಮಚ್ಚೆ ಕಂಡು ಬಂದು, ಹಣ್ಣುಗಳು ಮೃದುವಾಗಿ ಕೊಳೆತು ಉದುರುವುದು. ಈ ರೊಗಕ್ಕೆ ತುತ್ತಾದ ಹಣ್ಣುಗಳಲ್ಲಿ ಸಣ್ಣ ಗಾತ್ರದ ನೀರಿನಲ್ಲಿ ನೆನೆಸಿದ ವೃತ್ತಾಕಾರದ ಕುಳಿಯುಳ್ಳ ಗಾಯಗಳು ಕಂಡುಬರುತ್ತವೆ. ಈ ರೀತಿಯ ಗಾಯಗಳು ವೃದ್ಧಿಯಾಗಿ ಕಾಯಿ ಕೊಳೆಯುತ್ತವೆ. ಇದರಿಂದ ಹಣ್ಣುಗಳ ಮಾರಾಟದ ಬೆಲೆ ಕಡಿಮೆಯಾಗುತ್ತದೆ.
ನಿರ್ವಹಣೆ: ರೋಗಕ್ಕೆ ತುತ್ತಾದ ಹಣ್ಣುಗಳನ್ನು ಕಿತ್ತು ನಾಶಪಡಿಸುವುದು. ಕೊಯ್ಲು ಮಾಡುವ 20 ದಿನಗಳ ಮುಂಚೆ ಪ್ರತಿ ಲೀಟರ್ ನೀರಿಗೆ 2.0 ಗ್ರಾಂ ಮ್ಯಾಂಕೊಜೆಬ್ ಅಥವಾ 1.0 ಗ್ರಾಂ ಕಾರ್ಬನ್ಡೈಜಿಮ್ ಸೇರಿಸಿ ಆ ದ್ರಾವಣವನ್ನು ಹಣ್ಣುಗಳಿರುವ ರೆಂಬೆಗಳಿಗೆ ಚೆನ್ನಾಗಿ ಸಿಂಪಡಿಸಬೇಕು.
| ಡಾ. ಪಲ್ಲವಿ ಕೆ. ಸಸ್ಯ ಸಂರಕ್ಷಣಾ ತಜ್ಞರು
| ದಿವಾಕರ್ ಮಂಡ್ಯ
ಈ ಮರವನ್ನು ಕಟಾವು ಮಾಡಲು 20-30 ವರ್ಷ ಬೇಕಾಗುತ್ತದೆ. ಅದಾಗ್ಯೂ ನಿಖರವಾದ ಸಮಯವು ಮಹಾಗನಿಯ ನಿರ್ಧಿಷ್ಟ ಜಾತಿಗಳು, ಬೆಳೆಯುತ್ತಿರುವ ಪರಿಸ್ಥಿತಿ ಮತ್ತು ಮರದ ಆರೈಕೆ/ ನಿರ್ವಹಣೆ ಕ್ರಮಗಳು ಬಹಳ ಮುಖ್ಯ. ಸ್ಥಳ ಮತ್ತು ಹವಾಮಾನದ ಪರಿಸ್ಥಿತಿಗಳ ಆಧಾರದ ಮೇಲೆ ಮರದ ಬೆಳವಣಿಗೆಯ ಸಮಯವು ಬದಲಾಗುತ್ತದೆ.
| ಡಾ. ರಘು ಬಿ ಅರಣ್ಯಶಾಸ್ತ್ರ
ರೈತರ ಸಮಸ್ಯೆಗಳಿಗೆ ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ, ವಿಸ್ತರಣಾ ನಿರ್ದೇಶನಾಲಯ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು. ಇಲ್ಲಿನ ತಜ್ಞರು ಪ್ರತಿ ಸೋಮವಾರ ಉತ್ತರಿಸಲಿದ್ದಾರೆ. ನಿಮ್ಮ ಪ್ರಶ್ನೆಗಳನ್ನು 18004250571/ 080-23627889 ಸಂಖ್ಯೆಗೆ ಕರೆ ಮಾಡಿ ತಿಳಿಸಿ ಅಥವಾ 94824 77812 ಸಂಖ್ಯೆಗೆ ವಾಟ್ಸ್ಆಪ್ ಮಾಡಿhttps://www.vijayavani.net/i-wont-prefer-working-with-debut-directors-says-vijay-deverakonda/https://www.vijayavani.net/ravishastri-speaks-about-hardik-captaincy