ಮಸ್ಕಿ ಜಲಾಶಯಕ್ಕೆ ಒಳಹರಿವು ಹೆಚ್ಚಳ

mask dam
ಮಸ್ಕಿ ಜಲಾಯದಿಂದ ಹಳ್ಳಕ್ಕೆ ಶನಿವಾರ ನೀರು ಬಿಡಲಾಯಿತು.
Published on

ಮಸ್ಕಿ: ಇಲ್ಲಿನ ಮಸ್ಕಿ ನಾಲಾ ಜಲಾಶಯಕ್ಕೆ ಒಳಹರಿವು ಹೆಚ್ಚಿದ್ದು, ಶನಿವಾರ ನಸುಕಿನ ಜಾವ 500 ಕ್ಯೂಸೆಕ್ ನೀರನ್ನು ಹಳ್ಳಕ್ಕೆ ಬಿಡಲಾಗಿದೆ.

ತಾಲೂಕಿನ ಮಾರಲದಿನ್ನಿ ಬಳಿ ನಿರ್ಮಿಸಿರುವ ಮಸ್ಕಿ ಜಲಾಶಯದ ಹಿಂಭಾಗದ ಪ್ರದೇಶಗಳಾದ ಕುಷ್ಟಗಿ, ಗಜೇಂದ್ರಗಡ ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಒಳಹರಿವು ಹೆಚ್ಚಾಗಿದೆ.

ಯಾವುದೇ ಕ್ಷಣದಲ್ಲಿ ಜಲಾಶಯ ಭರ್ತಿ ಆಗುವ ಸಾಧ್ಯತೆ ಇದೆ. ಡ್ಯಾಂ ಸುರಕ್ಷತೆ ದೃಷ್ಟಿಯಿಂದ ಹೆಚ್ಚಿನ ಪ್ರಮಾಣದ ನೀರನ್ನು ಹಳ್ಳಕ್ಕೆ ಹರಿಸಲಾಗುತ್ತಿದೆ. ಡ್ಯಾಂನ ಎರಡು ಗೇಟ್ ತೆರೆದು ನೀರು ಬಿಟ್ಟಿದ್ದು ಮಾರಲದಿನ್ನಿ, ವೆಂಕಟಾಪುರ, ಹುಲ್ಲೂರು, ಉದ್ಬಾಳ, ಬಳಗಾನೂರು, ಬೆಳ್ಳಿಗನೂರು ಮತ್ತು ಜಾಲವಾಡಗಿ ಗ್ರಾಮಗಳ ಜನರು ಜಾನುವಾರುಗಳನ್ನು ಹಳ್ಳಕ್ಕೆ ಇಳಿಸದೆ ಮುಂಜಾಗ್ರತೆ ವಹಿಸಬೇಕೆಂದು ಜಲಾಶಯದ ಎಇಇ ದಾವೂದ್ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net