

ಕಕ್ಕೇರಿ: ಪ್ರನಾಳ ಶಿಶು ಚಿಕಿತ್ಸೆ ಮೂಲಕ ಮಕ್ಕಳಾಗದ ಕೊರಗು ದೂರಮಾಡಿಕೊಳ್ಳಬೇಕು ಎಂದು ಡಾ.ವರ್ಷಾ ಪಾಟೀಲ ಹೇಳಿದರು.
ಖಾನಾಪುರ ಪಟ್ಟಣದ ಶಿವಸ್ಮಾರಕ ಸಭಾಂಗಣದಲ್ಲಿ ಭಾನುವಾರ ಹೋಪ್ ಫರ್ಟಿಲಿಟಿ ಸೆಂಟರ್ನಿಂದ ವಂಧ್ಯತ್ವ ಚಿಕಿತ್ಸಾ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಫಲವತ್ತತೆ ಸಮಸ್ಯೆಗಳಿರುವ ಜನರಿಗೆ ಇನ್ವಿಟ್ರೊ ಫಲೀಕರಣ ಉತ್ತಮವಾಗಿದೆ. ಗರ್ಭಾಶಯಕ್ಕೆ ಹಾಕಿದಾಗ ಪ್ರನಾಳ ಶಿಶು ಉತ್ಪತ್ತಿಗೆ ಕಾರಣವಾಗುತ್ತದೆ. ಈ ಮೂಲಕ ಗರ್ಭಧಾರಣೆ ಕನಸು ನನಸು ಮಾಡಿಕೊಳ್ಳಬಹುದು. ಸಮಾಜದ ಟೀಕೆಗಳಿಗೆ ಹೆದರದೆ ಜನರು ಮುಂದೆ ಬಂದು ಮಕ್ಕಳನ್ನು ಪಡೆಯಬಹುದು ಎಂದರು.
ಡಾ.ಸವಿತಾ ಜೋಶಿ ಮಾತನಾಡಿದರು. ಖಾನಾಪುರ ಶಿಣಾಧಿಕಾರಿ ರಾಮಪ್ಪ ಪಿ. ಹಾಗೂ ಪತ್ರಕರ್ತ ಪ್ರಕಾಶ ದೇಶಪಾಂಡೆ, ಇತರರಿದ್ದರು.
ಪುರದ ಶಿವಸ್ಮಾರಕ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ವರ್ಷಾ ಪಾಟೀಲ ಮಾತನಾಡಿದರು. ಡಾ.ಸವಿತಾ ಜೋಶಿ, ಪ್ರಕಾಶ ದೇಶಪಾಂಡೆ, ರಾಮಪ್ಪ ಪಿ. ಇದ್ದರು.