

ಗುಳೇದಗುಡ್ಡ: ನಾವು ಸೇವಿಸುವ ಆಹಾರ, ಅದನ್ನು ಸೇವಿಸುವ ಕ್ರಮ, ಅಶುದ್ಧ ಗಾಳಿ, ನೀರು, ಇಂದಿನ ಯಾಂತ್ರಿಕೃತ ಯುಗದ ಜೀವನ ಪದ್ಧತಿ, ಒತ್ತಡದಲ್ಲಿ ಬದುಕುವ ಜೀವನ, ಸಕಾಲದಲ್ಲಿ ನಡೆಯದ ಮದುವೆ ಮತ್ತಿತರ ಕಾರಣಗಳಿಂದಾಗಿ ಬಂಜೆತನ ಉಂಟಾಗುತ್ತದೆ ಎಂದು ಡಾ. ಬಸವರಾಜ ಬಂಡನೂರ ಹೇಳಿದರು.
ಪಟ್ಟಣದ ಡಾ. ಬಸವರಾಜ ಬಂಟನೂರ ಅವರ ಬನಶಂಕರಿ ಆಸ್ಪತ್ರೆ ಹಾಗೂ ಡಾ. ಸಂಧ್ಯಾ ಮಿಶ್ರಾ ಅವರ ಬೆಂಗಳೂರಿನ ಮಿಲನ್ ರ್ಟಿಲಿಟಿ ಆಸ್ಪತ್ರೆ ಸಹಯೋಗದೊಂದಿಗೆ ಸ್ಥಳೀಯ ಬನಶಂಕರಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಬಂಜೆತನ ಉಚಿತ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಂಜೆತನ ನಿವಾರಣೆಗೆ ಸೂಕ್ತ ತಂತ್ರಜ್ಞಾನ ಮೂಲಕ ಅಂದಾಜು 19 ವರ್ಷಗಳ ಅನುಭವ ಹೊಂದಿರುವ ಡಾ. ಸಂಧ್ಯಾ ಮಿಶ್ರಾ ಅವರು ಪಟ್ಟಣ ಸೇರಿ ಸುತ್ತಲಿನ ಹಳ್ಳಿಗಳ ಜನತೆಗೆ ತಮ್ಮ ಸೇವೆ ನೀಡಲು ಬಂದಿರುವುದು ಶ್ಲಾಘನೀಯ. ದಂಪತಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಶಿಬಿರದಲ್ಲಿ ಅಂದಾಜು 30ಕ್ಕೂ ಹೆಚ್ಚು ದಂಪತಿಗಳು ಭಾಗವಹಿಸಿದ್ದರು. ಸಂಸ್ಥೆ ಅಧಿಕಾರಿ ಮಂಜುನಾಥ ಎಚ್. ಕೆ. ಲಾಲಸಾಬ ನದ್ಾ, ನೂರೇಶ ನಿಡಗುಂದಿ, ಶಿವು ಉದ್ನೂರ, ಖಾಜಾಮೈನುದ್ದೀನ್ ಸಿರಸಂಗಿ, ಸಿದ್ದು ಸೇರಿ ಆಸ್ಪತ್ರೆ ಸಿಬ್ಬಂದಿ ಪಾಲ್ಗೊಂಡಿದ್ದರು.