ಇನ್ಫೆಂಟ್ ಜೀಜಸ್ ಶಾಲೆಯಲ್ಲಿ ವನಮಹೋತ್ಸವ

mng--5 Aug InFent Jesus
Published on


ಮಂಗಳೂರು: ನಗರದ ಮೇರಿಹಿಲ್ ಇನ್ಫೆಂಟ್ ಜೀಜಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಮತ್ತು ಪೌರರಕ್ಷಣಾ ತಂಡದ ವತಿಯಿಂದ ವನಮಹೋತ್ಸವ ಆಚರಿಸಲಾಯಿತು.


ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ.ಮುರಲೀ ಮೋಹನ್ ಚೂಂತಾರು ಮಾತನಾಡಿ, ವನಮಹೋತ್ಸವವನ್ನು ಪರಿಸರದ ಹಬ್ಬವಾಗಿ ಆಚರಿಸಬೇಕು. ಗಿಡ ನೆಟ್ಟು, ಪರಿಸರ ಬೆಳೆಸಿ ಉಳಿಸೋಣ ಎಂದರು.
ಈ ಸಂದರ್ಭದಲ್ಲಿ ಇನ್ಫೆಂಟ್ ಜೀಜಸ್ ಶಾಲೆಯ ವಿದ್ಯಾರ್ಥಿಗಳಾದ ವಿಕ್ರಮ್ ಮತ್ತು ಋತು ಅವರು ಹಸಿರು ಪರಿಸರ ಸಂರಕ್ಷಣೆಯ ಬಗ್ಗೆ ಮಾತನಾಡಿದರು.


ಇನ್ಫೆಂಟ್ ಜೀಜಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪ್ರಣೀತ, ಶಿಕ್ಷಕಿಯರಾದ ಸಿಸ್ಟರ್ ಮ್ಯಾಗ್ದಲೀನ್, ಜೋಯ್ಸ ಡಿಕೋಸ್ತಾ ಹಾಗೂ ಶಾಲೆಯ ವಿದ್ಯಾರ್ಥಿಗಳು ಮತ್ತು ಗೃಹರಕ್ಷಕದಳ ಕಚೇರಿಯ ಅಧೀಕ್ಷಕ ರತ್ನಾಕರ ಎಂ., ಮಂಗಳೂರು ಘಟಕದ ಘಟಕಾಧಿಕಾರಿ ಮಾರ್ಕ್‌ಸೇರಾ, ಗೃಹರಕ್ಷಕರಾದ ಕೇಶವ ಶೆಟ್ಟಿಗಾರ್, ಸುನೀಲ್, ದಿವಾಕರ್, ಕನಕಪ್ಪ, ವಿನಯ್, ಸಂತೋಷ್, ಮಹೇಶ್ ಪ್ರಸಾದ್, ಭವಾನಿ, ಮರಿಯ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net