

ಸಿಂಧನೂರು: ಬಸವಣ್ಣ ಅವರ ಅನುಯಾಯಿಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಅವರು ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಕೆ.ಕರಿಯಪ್ಪ ಹೇಳಿದರು.
ನಗರದ ತಹಸಿಲ್ ಕಚೇರಿಯಲ್ಲಿ ಭಾನುವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಡಪದ ಅಪ್ಪಣ್ಣ ಅವರ ವಚನಗಳಲ್ಲಿ ಬಸವಣ್ಣ ಮೇಲಿನ ಗೌರವ, ಭಕ್ತಿ ಕಾಣಬಹುದು. ತನು, ಮನ, ಧನ ಎಲ್ಲವನ್ನು ಸಮಾಜಕ್ಕಾಗಿ ಅರ್ಪಣೆ ಮಾಡಿ ಸಾಮಾಜಿಕ ಅಸಮಾನತೆ, ಅಸ್ಪಶ್ಯತೆ, ಕಂದಾಚಾರದ ವಿರುದ್ಧ ಬಸವಣ್ಣ ಅವರೊಂದಿಗೆ ಕ್ರಾಂತಿ ಮಾಡಿದರು ಎಂದರು.
ನಿವೃತ್ತ ಸಮನ್ವಯಾಧಿಕಾರಿ ಎಚ್.ಜಿ.ಹಂಪಣ್ಣ ಮಾತನಾಡಿ, ಹಡಪದ ಅಪ್ಪಣ್ಣ, ಬಸವಣ್ಣ ಅವರ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತಿದ್ದರು. ಅನುಭವ ಮಂಟಪವನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸಿದ ಕೀರ್ತಿ ಅಪ್ಪಣ್ಣ ಅವರಿಗೆ ಸಲ್ಲುತ್ತದೆ. ವೃತ್ತಿ ಕಾಯಕದೊಂದಿಗೆ ವಚನ ರಚನೆ ಹಾಗೂ ಸಮಾಜ ಸೇವಾ ವೃತ್ತಿಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಜಿಪಂ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ತಹಸಿಲ್ ಕಚೇರಿ ಶಿರಸ್ತೇದಾರ್ ಅಂಬಾದಾಸ್, ತಾಲೂಕು ಹಡಪದ ಸಮಾಜದ ಅಧ್ಯಕ್ಷ ಭೀಮಣ್ಣ ಬೆಳಗುರ್ಕಿ, ಕರವೇ ಜಿಲ್ಲಾಧ್ಯಕ್ಷ ಗಂಗಣ್ಣ ಡಿಶ್, ಪ್ರ.ಕಾರ್ಯದರ್ಶಿ ರಾಮಕೃಷ್ಣ ಭಜಂತ್ರಿ, ಎಚ್.ಎನ್.ಬಡಿಗೇರ, ದೌಲಸಾಬ ದೊಡ್ಡಮನಿ, ವಿಶ್ವನಾಥ ನಾಯಕ, ಸುರೇಶ ಗೊಬ್ಬರಕಲ್, ಈಶಣ್ಣ, ಈರಣ್ಣ, ಸಿದ್ದು ಮಾಡಸಿರವಾರ, ಯರಿಯಪ್ಪ, ಜಗದೀಶ, ರಾಜು, ಗಣೇಶ, ಮುದುಕಪ್ಪ, ವೀರೇಶ, ಶರಣಪ್ಪ, ಬಾಲಾಜಿ, ಶರಣು, ರೇಣುಕಾ, ನಾಗರತ್ನ, ಗಿರಿಜಾ, ಮರಿಯಪ್ಪ ಸುಕಾಲಪೇಟೆ, ಶೇಖರಪ್ಪ ಗಿಣಿವಾರ, ಯಲ್ಲಪ್ಪ, ಅಮರೇಶ, ಮಾರುತಿ, ರಘು, ನಿಜಗುಣ ಇದ್ದರು.