ಕೈಗಾರಿಕೆ ಉದ್ದೇಶಕ್ಕೆ ಜಲ ಸರಬರಾಜು ಬೇಡ

23Jaggu5
ಹುಬ್ಬಳ್ಳಿ-ಧಾರವಾಡದ ಕೈಗಾರಿಗೆ ಪ್ರದೇಶಕ್ಕೆ ಹಿಡಕಲ್ ನೀರು ಪೂರೈಸದಂತೆ ಒತ್ತಾಯಿಸಿ ಬಸವ ಕಾಯಕ ಜೀವಿಗಳ ಸಂಘದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಮಹಾಂತೇಶ ಗುಡಸ, ಅಶೋಕ ಬೆಂಡಿಗೇರಿ, ಜಗದೀಶ ಖಡಬಡಿ, ಸೂರ್ಯಕಾಂತ ಬಾಂವಿ, ಶರಣ ಪ್ರಸಾದ ಇತರರಿದ್ದರು.
Published on

ಬೆಳಗಾವಿ: ಜಿಲ್ಲೆಯ ಹಿಡಕಲ್ ಜಲಾಶಯದ ನೀರನ್ನು ಹುಬ್ಬಳ್ಳಿ-ಧಾರವಾಡದ ಕೈಗಾರಿಕಾ ಪ್ರದೇಶಗಳಿಗೆ ನೀಡಬಾರದು ಎಂದು ಒತ್ತಾಯಿಸಿ ಬಸವ ಕಾಯಕ ಜೀವಿಗಳ ಸಂಘದಿಂದ ಗುರುವಾರ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಮನವಿ ಸಲ್ಲಿಸಲಾಯಿತು.

ಹಿಡಕಲ್ ಜಲಾಶಯದ ನೀರನ್ನು ಹುಬ್ಬಳ್ಳಿ-ಧಾರವಾಡದ ಕೈಗಾರಿಕಾ ಪ್ರದೇಶಗಳಿಗೆ ನೀಡಿದರೆ ಬೆಳಗಾವಿಯ ಜನತೆಗೆ ನೀರಿನ ಸಮಸ್ಯೆ ಎದುರಾಗಲಿದೆ. ಹುಬ್ಬಳ್ಳಿ-ಧಾರವಾಡಕ್ಕೆ ನೀರು ನೀಡುವ ಸರ್ಕಾರದ ಈ ನಿರ್ಧಾರ ಬೆಳಗಾವಿಗರ ಮೇಲೆ ಅನ್ಯಾಯ ಮಾಡಿದಂತಾಗುತ್ತದೆ. ಈಗಾಗಲೇ 15 ದಿನಕ್ಕೊಮ್ಮೆ ಕೆಲವೊಂದು ಕಡೆ ನೀರು ಸರಬರಾಜು ಮಾಡಲಾಗುತ್ತಿದೆ. ಬೆಳಗಾವಿಯ ಜನಪ್ರತಿನಿಧಿಗಳು ಈ ಕುರಿತು ಮೌನ ವಹಿಸಿರುವುದು ಸರಿಯಲ್ಲ. ಈ ಯೋಜನೆ ನಿಲ್ಲಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.

ಮಹಾಂತೇಶ ಗುಡಸ, ಅಶೋಕ ಬೆಂಡಿಗೇರಿ, ಜಗದೀಶ ಖಡಬಡಿ, ಸೂರ್ಯಕಾಂತ ಬಾಂವಿ, ಶರಣ ಪ್ರಸಾದ, ಶಿವಾನಂದ ವಾಘರವಾಡಿ, ಶರಣು ಲಿಂಗಾಯತ, ಎಸ್.ಎಸ್. ಪಾಟೀಲ, ಶಂಕರ ಗಡಗಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net