ಬೇಡಿಕೆಗೆ ಅನುಗುಣವಾಗಿ ಉದ್ಯಮ ಹೆಚ್ಚಿಸಬೇಕಿದೆ

18 SRS 2
Published on

ಶಿರಸಿ: ಭೌಗೋಳಿಕವಾಗಿ ಭಿನ್ನವಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಔದ್ಯೋಗಿಕ ಕ್ರಾಂತಿಗೆ ಅವಕಾಶ ಕಡಿಮೆ ಇದೆ. ಆದರೆ, ಸ್ಥಳೀಯ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಮಾಡುವ ಉದ್ಯಮಗಳನ್ನು ಇನ್ನಷ್ಟು ಹೆಚ್ಚಿಸಬೇಕಿದೆ ಎಂದು ಉಪವಿಭಾಗಾಧಿಕಾರಿ ಕೆ. ಕಾವ್ಯಾರಾಣಿ ಹೇಳಿದರು.

ನಗರದಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಉದ್ಯಮ ಮಾಹಿತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಾಗತಿಕರಣವಾದ ಮೇಲೆ ದೇಶದಲ್ಲಿ ಕೈಗಾರಿಕಾ ಮಹತ್ವ ಅರ್ಥವಾಗಿ ಕೈಗಾರಿಕೆ ವೇಗವಾಗಿ ಬೆಳೆಯಲು ಸಾಧ್ಯವಾಯಿತು. ಕೃಷಿ ಉತ್ಪನ್ನಗಳ ಹೊಸ ಮಾರುಕಟ್ಟೆಯನ್ನು ಕೈಗಾರಿಕೆ ನೀಡಿದೆ. ಅಭಿವೃದ್ಧಿ ಹೊಂದಿದ ದೇಶಕ್ಕೆ ನಮ್ಮ ದೇಶವು ಕೈಗಾರಿಕೆ ಸ್ಪರ್ಧೆ ನೀಡುತ್ತಿದೆ ಎಂದರು.</p><p>ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಕೆ.ಬಿ. ಲೋಕೇಶ ಹೆಗಡೆ ಮಾತನಾಡಿ, ಕಾರ್ವಿುಕರು ಹಾಗೂ ಮಾರುಕಟ್ಟೆಯನ್ನು ಅವಲೋಕಿಸಿ, ಸಣ್ಣ ಕೈಗಾರಿಕೆಯನ್ನು ಬೆಳೆಸಬೇಕು. ಅದಕ್ಕೆ ಸರ್ಕಾರ ಹಾಗೂ ಸಮೂಹ ಸಹಕಾರ ನೀಡಬೇಕಿದೆ ಎಂದರು.

ಸಣ್ಣ ಕೈಗಾರಿಕಾ ಸಂಘದ ಜಿಲ್ಲಾಧ್ಯಕ್ಷ ಅಣ್ಣಪ್ಪ ನಾಯ್ಕ ಮಾತನಾಡಿ, ಜಿಲ್ಲೆಯ ಕೈಗಾರಿಕಾ ವಸಾಹತು ಮಾತ್ರ ಹಾಗೆಯೇ ಇದ್ದು, ಅಭಿವೃದ್ಧಿಯಾಗಿಲ್ಲ. ಬೃಹತ್ ಕೈಗಾರಿಕಾ ಸ್ಥಾಪಿಸಲು ಕನಿಷ್ಠ 5 ಎಕರೆ ಜಾಗ ಅವಶ್ಯಕತೆಯಿದ್ದು, ಕೈಗಾರಿಕಾ ವಸಾಹತು ಕೇಂದ್ರಕ್ಕೆ ಇನ್ನೂ ಜಾಗ ವಿಸ್ತರಣೆಯಾಗಬೇಕು. ಕೋವಿಡ್ ಸಮಯದಲ್ಲಿ ಕೈಗಾರಿಕೋದ್ಯಮಿಗಳು ಸಂಕಷ್ಟ ಎದುರಿಸಿದ್ದಾರೆ. ಈಗ ಹೊಸ ಉದ್ಯಮ ಆರಂಭಿಸುವವರು ಆಸಕ್ತಿ ತೋರುತ್ತಿದ್ದಾರೆ. ಇಂತಹ 500 ಕ್ಕೂ ಅಧಿಕ ಆಸಕ್ತರು ಅರ್ಜಿ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರ ಜಾಗ ಒದಗಿಸಲು ಪ್ರಯತ್ನ ಮಾಡಬೇಕು ಎಂದರು.

ಕಟ್ಟಡ ಕಾರ್ವಿುಕರನ್ನು ಮಾತ್ರ ಕಾರ್ವಿುಕರನ್ನಾಗಿ ಕಾರ್ವಿುಕ ಇಲಾಖೆ ಗುರುತಿಸಿದೆ. ದೀರ್ಘ ಕಾಲದಿಂದ ಕೈಗಾರಿಕಾ ಕಾರ್ವಿುಕರು ಕೆಲಸ ಮಾಡುತ್ತಿದ್ದಾರೆ. ಅವರನ್ನು ಕಾರ್ವಿುಕರು ಎಂದು ಪರಿಗಣಿಸಬೇಕು ಎಂದರು.

ಸಣ್ಣ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಚ್.ವಿ. ಜಯಂತ ಮಾತನಾಡಿ, ಜಿಲ್ಲೆಯಲ್ಲಿ ಕೈಗಾರಿಕಾ ಭೂಮಿ ಅಭಿವೃದ್ಧಿ ಪಡಿಸಲು ಸಾಕಷ್ಟು ಸಮಸ್ಯೆಯಿದೆ. ಇಲ್ಲಿಯ ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗುವ ರೂಪುರೇಷೆ ಸಿದ್ಧಪಡಿಬೇಕು ಎಂದರು.

ಮಂಗಳೂರು ವಿಭಾಗದ ವಿಟಿಪಿಸಿ ಉಪ ನಿರ್ದೇಶ ಮಂಜುನಾಥ ಹೆಗಡೆ ಇದ್ದರು. ಕಾಸಿಯಾ ಅಧ್ಯಕ್ಷ ಎಂ.ಜಿ. ರಾಜಗೋಪಾಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net