ಶ್ರಮದಾಯಕ ಜೀವನಕ್ಕೆ ಮುಂದಾಗಿ

25 SND 03
ಸಿಂಧನೂರಿನ ಶ್ರೀ ಧರ್ಮಸ್ಥಳ ಸಿರಿ ಮನೆ ಬಸವಶ್ರೀ ಮಿಲೆಟ್ ಹೌಸ್‌ನಲ್ಲಿ ಸಿರಿಧಾನ್ಯಗಳ ಮಹತ್ವ ಕುರಿತ ಕಾರ್ಯಕ್ರಮವನ್ನು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಉದ್ಘಾಟಿಸಿದರು. ಸಿರಿ ಮಿಲೆಟ್ ನಿರ್ದೇಶಕ ದಿನೇಶ್ ಎಂ., ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಪಿ. ರುದ್ರಪ್ಪ, ನಿರ್ದೇಶಕರಾದ ರೋಹಿತಾಕ್ಷ, ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ. ಭೀಮನಗೌಡ, ಯೋಜನಾಧಿಕಾರಿ ಶೇಖರ್ ಶೆಟ್ಟಿ, ಮಾಲತೇಶ ಇತರರಿದ್ದರು.
Published on

ಸಿಂಧನೂರು: ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆ ರೈತರಲ್ಲಿ ಸಿರಿಧಾನ್ಯ ಕೃಷಿ ಮೂಲಕ ಪೌಷ್ಟಿಕ ಆಹಾರ ಭದ್ರತೆಗೆ ಪ್ರೋತ್ಸಾಹ ನೀಡಿದ್ದಾರೆ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.

ನಗರದಲ್ಲಿ ಶ್ರೀ ಧರ್ಮಸ್ಥಳ ಸಿರಿ ಮನೆ ಬಸವಶ್ರೀ ಮಿಲೆಟ್ ಹೌಸ್‌ನಲ್ಲಿ ಸಿರಿಧಾನ್ಯಗಳ ಮಹತ್ವ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ನಾವು ಸೇವಿಸುತ್ತಿರುವ ಆಹಾರಗಳು ವಿಷಯುಕ್ತವಾಗಿದ್ದು, ಶ್ರಮದಾಯಕ ಜೀವನ ಕಡಿಮೆಯಾಗಿರುವುದರಿಂದ ನಾವು ತೆಗೆದುಕೊಳ್ಳುವ ಆಹಾರದಿಂದ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದರು.

ಸಿರಿ ಮಿಲೆಟ್ ನಿರ್ದೇಶಕ ದಿನೇಶ್ ಎಂ. ಮಾತನಾಡಿ, ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶಯ ಪೌಷ್ಟಿಕಾಂಶ ಭರಿತ ಸಿರಿಧಾನ್ಯಗಳನ್ನು ರೈತರಲ್ಲಿ ಬೆಳೆಸುವಲ್ಲಿ ಪ್ರೋತ್ಸಾಹ ನೀಡುವುದು. ರೈತರಿಗೆ ಯೋಗ್ಯ ಬೆಲೆ ಒದಗಿಸಿ, ಸಮಾಜಕ್ಕೆ ಪೌಷ್ಟಿಕಯುಕ್ತ ಆಹಾರ ದೊಕಿಸುವುದಾಗಿದೆ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಪಿ. ರುದ್ರಪ್ಪ ಮಾತನಾಡಿ, ಸಿರಿಧಾನ್ಯ ಬಳಕೆಯಿಂದ ರೋಗದಿಂದ ಮುಕ್ತರಾಗಬಹುದು. ಜನತೆಗೆ ಜಾಗೃತಿ ಮೂಡಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಜಾಗೃತರಾಗ ಬೇಕಾಗಿದೆ. ಇದೊಂದು ಭವಿಷ್ಯದ ಆಹಾರ. ನಾವೆಲ್ಲರೂ ಪ್ರತಿ ದಿನ ಸಿರಿಧಾನ್ಯ ಬಳಕೆ ಮಾಡೋಣ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net