ಕೊನಟ್ಟ ಕೆರೆ ಒಡಲು ಸೇರುತ್ತಿದೆ ಕೈಗಾರಿಕೆ ತ್ಯಾಜ್ಯ

03 04 2025_BGR RURAL_PAGE_3
ದೊಡ್ಡಬಳ್ಳಾಪುರಛ ಫಾಕ್ಸ್​ ಕಾನ್​ ಕಂಪನಿಯಲ್ಲಿನ ಅವ್ಯವಸ್ಥೆಯನ್ನು ಶಾಸಕ ಧೀರಜ್​ ಮುನಿರಾಜು ಹಾಗೂ ಜಿಲ್ಲಾಧಿಕಾರಿಗೆ ವಿವರಿಸಿದರು. ಜಿಪಂ ಸಿಇಒ ಅನುರಾಧಾ, ತಹಸೀಲ್ದಾರ್​ ವಿಭಾವಿದ್ಯಾ ರಾಠೋಡ್​, ತಾಪಂ ಇಓ ಮುನಿರಾಜು, ಕೊನಟ್ಟ ಗ್ರಾಪಂ ಅಧ್ಯೆ ಜ್ಯೋತಿ, ಪಿಡಿಒ ರಶ್ಮಿ ಹಾಗೂ ಪೊಲೀಸ್​ ಸಿಬ್ಬಂದಿ ಇದ್ದರು. 
Published on

ದೊಡ್ಡಬಳ್ಳಾಪುರ: ಫಾಕ್ಸ್​ ಕಾನ್​ ಕಂಪನಿಯ ಕಲುಷಿತ ನೀರು ತಾಲೂಕಿನ ಕೊನಟ್ಟ ಕೆರೆ ಒಡಲು ಸೇರುತ್ತಿದೆ. ರಾಜಕಾಲುವೆ ಮೂಲಕ ಕೆರೆಗೆ ಹರಿಯುತ್ತಿರುವ ತ್ಯಾಜ್ಯ ನೀರನ್ನು ಕೂಡಲೇ ತಡೆಯಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಕಂಪನಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು.

ಗ್ರಾಮಸ್ಥರ ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಬಂದ ಜಿಪಂ ಸಿಇಒ ಅನುರಾಧಾ, ತಹಸೀಲ್ದಾರ್​ ವಿಭಾವಿದ್ಯಾ ರಾಠೋಡ್​, ತಾಪಂ ಇಒ ಮುನಿರಾಜು, ಕೊನಟ್ಟ ಗ್ರಾಪಂ ಅಧ್ಯೆ ಜ್ಯೋತಿ, ಪಿಡಿಒ ರಶ್ಮಿ ಕಂಪನಿಯವರೊಂದಿಗೆ ಮಾತನಾಡಲು ಯತ್ನಿಸಿದರಾದರೂ ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆವರೆಗೂ ಕಂಪನಿಯ ಯಾವ ಸಿಬ್ಬಂದಿಯೂ ಜವಾಬ್ದಾರಿಯುತ ಉತ್ತರ ನೀಡಲಿಲ್ಲ.

ನಂತರ ಶಾಸಕ ಧೀರಜ್​ ಮುನಿರಾಜು, ಜಿಲ್ಲಾಧಿಕಾರಿ ಬಸವರಾಜು ಆಗಮಿಸಿದ ನಂತರ ಕಂಪನಿ ಪರವಾಗಿ ಒಬ್ಬ ನೌಕರ ಆಗಮಿಸಿ ಕಲುಷಿತ ನೀರು ಹರಿಯದಂತೆ ಕ್ರಮವಹಿಸುವುದಾಗಿ ತಿಳಿಸಿದರು. ಕಂಪನಿ ಬಳಿ ಕಲುಷಿತ ನೀರಿಗಾಗಿಯೇ ಒಂದು ಕುಂಟೆ ಜಾಗ ನಿರ್ಮಿಸಲಾಗಿದೆ. ಈಗ ಆ ಕುಂಟೆ ಕಟ್ಟೆ ಒಡೆದು ರಾಜಕಾಲುವೆಗೆ ಹರಿಬಿಡಲಾಗಿದೆ. ಈ ಕಲುಷಿತ ನೀರು ನೇರವಾಗಿ ಕೊನಟ್ಟ ಕೆರೆಗೆ ಹರಿಯುತ್ತಿದೆ. ಒಡೆದಿರುವ ಕುಂಟೆಯ ಕಟ್ಟೆ ಮುಚ್ಚುವಂತೆ ಸ್ಥಳಿಯರು ಪಟ್ಟು ಹಿಡಿದರು. ತ್ಯಾಜ್ಯ ನೀರು ರಾಜಕಾಲುವೆ ಸೇರಿ ಯಾವುದೇ ಮೂಲಗಳಿಂದ ಹೊರಬಾರದಂತೆ ಸಿಮೆಂಟ್​ ವಾಲ್​ ನಿರ್ಮಿಸುವಂತೆ ಆಗ್ರಹಿಸಿದರು.

ಕುಂಟನೆಪ ಹೇಳುತ್ತಾ ಸುಮ್ಮನೇ ಕಾಲಹರಣ ಮಾಡುತ್ತಿದ್ದರಿಂದ ಹರಿಯುತ್ತಿರುವ ಕಲುಷಿತ ನೀರು ನಿಲ್ಲುವವರೆಗೂ ಸ್ಥಳದಿಂದ ಹೊರಡುವುದಿಲ್ಲ ಎಂದು ಶಾಸಕ ಧೀರಜ್​ ಮುನಿರಾಜ್​ ಪಟ್ಟುಹಿಡಿದರು. ಜಿಲ್ಲಾಧಿಕಾರಿ ಬಸವರಾಜು ಆಗಮಿಸಿ ಇಲ್ಲಿನ ಅವ್ಯವಸ್ಥೆಯನ್ನು ಶಾಸಕ ಧೀರಜ್​ ಮುನಿರಾಜು ಅವರಿಗೆ ವಿವರಿಸಿದರು. ಲೇಬರ್​ ಕ್ವಾರ್ಟಸ್​ನ ಚರಂಡಿ ಇಲ್ಲ, ಕೆರೆಗಳಿಗೆ ಹರಿಯುತ್ತಿರುವ ನೀರಿನ ಪರೀೆ ಮಾಡಿಸಿ ಕ್ರಮ ಜರುಗಿಸಿ ಸ್ಥಳಿಯರಿಗೆ ಕೆಲಸ ಕೊಡುವ ನಿಯಮವಿದೆ. ಆದರೆ ಈವರೆಗೆ ಕೆಲಸ ನೀಡಿಲ್ಲ. ಕಾನೂನು ಬಾಹಿರ ಲೇಬರ್​ ಶೆಡ್​ಗಳ ತೆರವುಗೊಳಿಸಿ. ಮತ್ತೆ ಪುನಾರ್ವತನೆಯಾದರೆ ಕಂಪನಿ ಮುಂದೆ ಧರಣಿ ಮಾಡಲಾಗುವುದು ಎಂದು ಶಾಸಕರು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net