

ಮೂಲ್ಕಿ: ಕೈಗಾರಿಕಾ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವ ಒದಗಿಸುವ ಜತೆಗೆ ವ್ಯಾಪಾರ ಕ್ಷೇತ್ರದ ಕಾರ್ಮಿಕರು ಮತ್ತು ವಾಲೀಕರೊಂದಿಗೆ ಸಂವಾದ ನಡೆಸಲು ಅವಕಾಶ ಒದಗಿಸುವ ಮೂಲಕ ವಿದ್ಯಾರ್ಥಿಗಳ ಪ್ರಾಪಂಚಿಕ ಜ್ಞಾನ ಹೆಚ್ಚಿಸುವ ಕಾರ್ಯ ನಡೆಸಲಾಗುತ್ತಿದೆ ಎಂದು ಮೂಲ್ಕಿ ಕಿಲ್ಪಾಡಿ ಮೆಡಲಿನ್ ಕಾಲೇಜು ಪ್ರಾಂಶುಪಾಲೆ ಲಿಡಿಯಾ ಮೆಂಡೋನ್ಸಾ ಹೇಳಿದರು.
ಮೂಲ್ಕಿ ಮೆಡಲಿನ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳ ತಂಡ ನವ ಮಂಗಳೂರು ಬಂದರು ಪ್ರಾಧಿಕಾರ, ಮಂಗಳೂರು ಕೃಷಿ ಉತ್ಪನ್ನ ವಾರುಕಟ್ಟೆ, ಕ್ಯಾಂಪ್ಕೋ ನಿಯಮಿತ ಹಾಗೂ ಕಲ್ಬಾವಿ ಕನ್ಸೂೃಮರ್ ಫುಡ್ ಸಂಸ್ಥೆ ಮೊದಲಾದ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿದರು
ಕೈಗಾರಿಕಾ ಭೇಟಿಯ ಮೂಲಕ ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನಗಳ ಬಗ್ಗೆ ಅರಿವು ಪಡೆಯುತ್ತಾರೆ. ಉದ್ಯಮಕ್ಕೆ ಭೇಟಿ ನೀಡಿದ ನಂತರ ವಿದ್ಯಾರ್ಥಿಗಳು ಸಿದ್ಧಾಂತ ಮತ್ತು ಪ್ರಾಯೋಗಿಕ ಎರಡು ಸಂಯೋಜಿತ ಜ್ಞಾನವನ್ನು ಪಡೆಯಬಹುದು. ಇದರಿಂದ ವಿದ್ಯಾರ್ಥಿಗಳು ಉದ್ಯೋಗ ಗಳಿಸುವ ಅವಕಾಶ ಹೆಚ್ಚಲಿದೆ ಎಂದರು.
ರಕ್ಷಕ - ಶಿಕ್ಷಕ ಸಂದ ಉಪಾಧ್ಯಕ್ಷ ಜೋಯೆಲ್ ಹೆರಾಲ್ಡ್ ಡಿಸೋಜ, ಉಪನ್ಯಾಸಕರಾದ ವಿಶಾಂತ್ ಶೆಟ್ಟಿ ಹಾಗೂ ತಾರಾ ಶೆಟ್ಟಿ ಜತೆಗಿದ್ದರು.