ಐಮೆಕ್ಸ್ ಕೈಗಾರಿಕಾ ಪ್ರದರ್ಶನ,  ಹುಬ್ಬಳ್ಳಿಯ ಕಲ್ಲೂರ ಲೇಔಟ್ ನಲ್ಲಿ ಆಯೋಜನೆ

IMG_20250515_194705_223.jpg
Published on

ಹುಬ್ಬಳ್ಳಿ: ಇಲ್ಲಿಯ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ಮೇ 16ರಿಂದ 19ರ ವರೆಗೆ ಐಮೆಕ್ಸ್ ಹುಬ್ಬಳ್ಳಿ ಕೈಗಾರಿಕಾ ವಸ್ತು ಪ್ರದರ್ಶನವನ್ನು ನಗರದ ಹೊಸ ನ್ಯಾಯಾಲಯ ಸಂಕೀರ್ಣ ಹತ್ತಿರದ ಕಲ್ಲೂರ ಲೇಔಟ್ ನಲ್ಲಿ ಆಯೋಜಿಸಲಾಗಿದೆ.

ಮೇ 16ರಂದು ಸಂಜೆ 6ಕ್ಕೆ ಐಮೆಕ್ಸ್ ಉದ್ಘಾಟನೆ ನಡೆಯಲಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್, ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅತಿಥಿಗಳಾಗಿ ಪಾಲ್ಗೊಳ್ಳುವರು.

ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕರಾದ ಮಹೇಶ ಟೆಂಗಿನಕಾಯಿ, ಪ್ರಸಾದ್ ಅಬ್ಬಯ್ಯ, ಮೇಯರ್ ರಾಮಪ್ಪ ಬಡಿಗೇರ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ., ಡಿಐಸಿ ಜಂಟಿ ನಿರ್ದೇಶಕ ಶಿವಪುತ್ರಪ್ಪ ಆರ್.ಎಚ್., ಎಂಎಸ್ಎಂಇ ಡಿಎಫ್ಒ ಬಿ.ಎಸ್. ಜವಳಗಿ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಐಮೆಕ್ಸ್ ಅಧ್ಯಕ್ಷ ರಮೇಶ ಪಾಟೀಲ್ ಉಪಸ್ಥಿತರಿರುವರು.

ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಗಿರೀಶ್ ನಲವಡಿ ಅಧ್ಯಕ್ಷತೆ ವಹಿಸುವರು.
ಮೇ 17ರಂದು ಸಂಜೆ 5.30ಕ್ಕೆ ಉದ್ಯಮ ರತ್ನ 2024 ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಮೇ 19ರಂದು ಸಂಜೆ 4ಕ್ಕೆ ಸಮಾರೋಪ ಜರುಗಲಿದೆ ಎಂದು ಸಂಘದ ಕಾರ್ಯದರ್ಶಿ ಶಂಕರ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net