ಕೈಗಾರಿಕಾ ಸವಾಲುಗಳ ಎದುರಿಸಲು ಒಪ್ಪಂದ

25 SANDOOR 01
ಸಂಡೂರು ತಾಲೂಕು ನಂದಿಹಳ್ಳಿ ಪಿಜಿ ಸೆಂಟರ್‌ನಲ್ಲಿರುವ ಖನಿಜ ಸಂಸ್ಕರಣಾ ವಿಭಾಗವು ಬಿಕೆಜಿ ಮೈನ್ಸ್ ಕಂಪನಿಯೊಂದಿಗೆ ಶೈಕ್ಷಣಿಕ ವಿನಿಮಯ ಮತ್ತು ಜ್ಞಾನ ವರ್ಗಾವಣೆಯ ಒಪ್ಪಂದ ಮಾಡಿಕೊಳ್ಳಲಾಯಿತು. ಬಿಕೆಜಿ ಮೈನ್ಸ್ ಮ್ಯಾನೇಜರ್ ಪಿ.ಶ್ರೀನಿವಾಸರಾವ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರಮೋದ ರಿತ್ತಿ, ಭೂ ವಿಜ್ಞಾನಿ ಕೇಶವ್, ಪಿಜಿ ಸೆಂಟರ್‌ನ ಡಾ.ಬಸವರಾಜ ಹಟ್ಟಿ, ಡಾ.ಕುಮಾರ್ ಇದ್ದರು.
Published on

ಸಂಡೂರು: ಗಣಿಗಾರಿಕೆ, ಪರಿಸರ ಮತ್ತು ಖನಿಜ ಸಂಸ್ಕರಣೆ ಕ್ಷೇತ್ರಗಳಲ್ಲಿನ ಕೈಗಾರಿಕಾ ಸವಾಲುಗಳನ್ನು ಎದುರಿಸಲು ಮಹತ್ವದ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಬಿಕೆಜಿ ಮೈನ್ಸ್ ಮ್ಯಾನೇಜರ್ ಪಿ.ಶ್ರೀನಿವಾಸರಾವ್ ಹೇಳಿದರು.

ನಂದಿಹಳ್ಳಿ ಪಿಜಿ ಸೆಂಟರ್‌ನ ಖನಿಜ ಸಂಸ್ಕರಣಾ ವಿಭಾಗ ಬಿಕೆಜಿ ಮೈನ್ಸ್ ಕಂಪನಿಯೊಂದಿಗೆ ಶೈಕ್ಷಣಿಕ ವಿನಿಮಯ ಮತ್ತು ಜ್ಞಾನ ವರ್ಗಾವಣೆಯ ಒಪ್ಪಂದ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

ಈ ಪಾಲುದಾರಿಕೆಯು ಉದ್ಯಮದ ವೃತ್ತಿಪರರ ಪ್ರಾಯೋಗಿಕ ಒಳನೋಟಗಳೊಂದಿಗೆ ಶೈಕ್ಷಣಿಕ ಸಂಶೋಧಕರ ಪರಿಣತಿಯನ್ನು ಸಂಯೋಜಿಸುವ ಮೂಲಕ ನಾವೀನ್ಯ ಮತ್ತು ಪ್ರಾಯೋಗಿಕ ಸಮಸ್ಯೆಗಳನ್ನು ಪರಿಹರಿಸುವ ಗುರಿ ಹೊಂದಲಾಗಿದೆ. ಯುವಜನತೆಯಲ್ಲಿ ಸಕ್ರಿಯ ಸಂಶೋಧನೆ ಉತ್ತೇಜಿಸಲು ವಿನ್ಯಾಸಗೊಳಿಸಲಾಗಿದೆ. ಟೆಕ್-ಟಾಕ್ಸ್ ಮೂಲಕ ಉದ್ಯಮದ ತಜ್ಞರು ಜ್ಞಾನ ಮತ್ತು ಅನುಭವದ ಕುರಿತು ತಿಳಿಸಲಿದ್ದಾರೆ ಎಂದರು.


ಖನಿಜ ಸಂಸ್ಕರಣಾ ವಿಭಾಗದ ಅಧ್ಯಕ್ಷ ಡಾ.ಪಿ.ಶರತ್ ಕುಮಾರ್ ಮಾತನಾಡಿ, ಈ ಯೋಜನೆಯಲ್ಲಿ ಅತಿಥಿ ಉಪನ್ಯಾಸಗಳು, ಕಾರ್ಯಾಗಾರಗಳು, ಇಂಟರ್ನ್‌ಶಿಪ್‌ಗಳು ಮತ್ತು ಜಂಟಿ ಸಂಶೋಧನೆಗಳನ್ನು ಒಳಗೊಂಡಿರುತ್ತದೆ. ವಿದ್ಯಾರ್ಥಿಗಳ ವೃತ್ತಿಜೀವನವನ್ನು ಉತ್ಕಷ್ಟಗೊಳಿಸಲು ಅಗತ್ಯವಾದ ಕೌಶಲ ಮತ್ತು ಜ್ಞಾನ ನೀಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net