ಉದ್ಯಮ ಮಾರ್ಗದರ್ಶಿ -ವಿದ್ಯಾರ್ಥಿಗಳ ಸಭೆ

CBS
Published on

ಹುಬ್ಬಳ್ಳಿ: ಎಂಬಿಎ ವಿದ್ಯಾರ್ಥಿಗಳ ಪ್ರಾಜೆಕ್ಟ್ ವರ್ಕ್​ಗೆ ನೆರವಾಗುತ್ತಿರುವ ಉದ್ಯಮ ಮಾರ್ಗದರ್ಶಿಗಳು ಹಾಗೂ ವಿದ್ಯಾರ್ಥಿಗಳ ಸಭೆ ನಗರದ ಚೇತನ ಬಿಜಿನೆಸ್ ಸ್ಕೂಲ್​ನಲ್ಲಿ ಶುಕ್ರವಾರ ನಡೆಯಿತು. 12ಕಂಪನಿಗಳ 25 ಮಾರ್ಗದರ್ಶಿಗಳು ಭಾಗವಹಿಸಿದ್ದರು.

ಚರ್ಚೆಯಲ್ಲಿ ಭಾಗವಹಿಸಿದ್ದ ವಿವಿಧ ಕಂಪನಿಗಳ ಮಾರ್ಗದರ್ಶಿಗಳು, ತಮ್ಮ ಕಂಪನಿಗಳಲ್ಲಿ ಮಾರ್ಗದರ್ಶನ ಪಡೆಯುತ್ತಿರುವ ವಿದ್ಯಾರ್ಥಿಗಳ ಕಲಿಕೆಯ ಸಾಮರ್ಥ್ಯ, ಕಾರ್ಯಕ್ಷಮತೆ, ಬದ್ಧತೆ ಹಾಗೂ ಒಳಗೊಳ್ಳುವಿಕೆಯ ಕುರಿತು ಮಾತನಾಡಿ ಪ್ರಶಂಸೆ ವ್ಯಕ್ತಪಡಿಸಿದರು. ನೇಮಕಾತಿ ಹಾಗೂ ಪ್ರಾಜೆಕ್ಟ್​ಗಾಗಿ ಕಂಪನಿಗಳಲ್ಲಿ ನಿಯೋಜನೆಯನ್ನು ಕೊಡಿಸುವ ಬಗ್ಗೆ ವಿವರಿಸಿದರು.

ಕಾಲೇಜಿನ ನಿರ್ದೇಶಕ ಡಾ. ವಿ. ಎಂ. ಕೊರವಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕಾರ್ಪೆರೇಟ್ ವಲಯಕ್ಕೆ ಪ್ರವೇಶಿಸಲು ಅಗತ್ಯವಾದ ವ್ಯಕ್ತಿತ್ವವನ್ನು ಬೆಳೆಸಲು ಸಂಸ್ಥೆಯು ಶ್ರಮವಹಿಸುತ್ತಿದೆ. ಉದ್ಯಮ ಸಮೂಹವು ಶೈಕ್ಷಣಿಕ ಸಂಸ್ಥೆಯೊಂದಿಗೆ ಪರಸ್ಪರ ಲಾಭಕ್ಕಾಗಿ ಕೈಜೋಡಿಸಬೇಕು. ಬದಲಾಗುತ್ತಿರುವ ಶಿಕ್ಷಣ ಕ್ಷೇತ್ರದಲ್ಲಿ ಕೈಗಾರಿಕೆ ಅಥವಾ ಉದ್ಯಮ ಕ್ಷೇತ್ರ ಜತೆಯಾಗಿ ಸಾಗಬೇಕು ಎಂದರು.

ಡಾ. ಮಂಗಳಾ ಯರಗಟ್ಟಿ, ಡಾ. ಎಂ. ಎನ್. ಮಾಣಿಕ, ಡಾ. ಅನಿರುದ್ಧ, ಡಾ. ರಮಾಕಾಂತ ಕುಲಕರ್ಣಿ ಇದ್ದರು. ಡಾ. ಭಾರ್ಗವ ಚರ್ಚೆಯನ್ನು ಸಂಯೋಜಿಸಿದರು. ಡಾ. ಮಕಸೂದ್ ಸ್ವಾಗತಿಸಿದರು. ಪ್ರೊ. ಶ್ರೇಯಸ ನಿರೂಪಿಸಿದರು. ಪೊ›. ಶ್ವೇತಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net