ಶೀಘ್ರದಲ್ಲೇ ರಾಜಸ್ಥಾನದ ಜಮೀನಿಗೆ ಸಿಂಧೂ ನದಿ ನೀರು: ಶಿವರಾಜ್‌ಸಿಂಗ್ ಚೌಹಾಣ್ ಹೇಳಿಕೆ

bhajan lal sharma
Published on

ಬೆಂಗಳೂರು:ಪ್ರಧಾನಮಂತ್ರಿ ಸಲ್ ಭಿಮಾ ಯೋಜನೆಯಡಿ ದೇಶಾದ್ಯಂತ 35 ಲಕ್ಷ ರೈತರಿಗೆ 3,900 ಕೋಟಿ ರೂ.ಹಣವನ್ನು ಬುಧವಾರ ಬಿಡುಗಡೆ ಮಾಡಲಾಯಿತು.

ಜುಂಝನು ವಾಯುನೆಲೆಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್‌ಸಿಂಗ್ ಚೌಹಾಣ್ ಸಮ್ಮುಖದಲ್ಲಿ ಸಿಎಂ ಭಜನ್ ಲಾಲ್ ಶರ್ಮಾ, ಆನ್‌ಲೈನ್‌ನಲ್ಲಿ ಡಿಬಿಟಿ ಮುಖೇನ ಲಾನುಭವಿಗಳ ಖಾತೆಗೆ ಮೊದಲ ಕಂತು ಹಣ ವರ್ಗಾಯಿಸಿದರು. 3,900 ಕೋಟಿ ರೂ. ಪೈಕಿ 1,426 ಕೋಟಿ ರೂ.ಮೊತ್ತವು ರಾಜಸ್ಥಾನದ 9.70 ಲಕ್ಷ ರೈತರಿಗೆ ಸಿಕ್ಕಿದೆ.

ಶಿವರಾಜ್ ಸಿಂಗ್ ಚೌಹಾಣ್ ಮಾತನಾಡಿ, ನಮ್ಮ ಭೂಮಿ ವೀರರು, ಯೋಧರ ಮತ್ತು ತ್ಯಾಗಗಳಿಗೆ ನೆಲೆಯಾಗಿದೆ. ರೈತರಿಗಾಗಿ ಸೇವೆ ಸಲ್ಲಿಸುವುದು ನನ್ನ ಪ್ರಮುಖ ಧ್ಯೇಯವಾಗಿದೆ.ದೇಶದ ಕೃಷಿ ವ್ಯವಸ್ಥೆಯನ್ನು ವಿಶ್ವದಲ್ಲೇ ಅತ್ಯುತ್ತಮವಾಗಿ ಮಾಡುವುದು ನನ್ನ ಸಂಕಲ್ಪವಾಗಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಸಮೃದ್ಧ, ಶಕ್ತಿಶಾಲಿ ಭಾರತವನ್ನು ನಿರ್ಮಿಸುತ್ತಿದ್ದೇವೆ. ಯಮುನಾ, ಚಂಬಲ್ ಮತ್ತು ಸಿಂಧೂ ನದಿ ನೀರು ರಾಜಸ್ಥಾನದ ಜಮೀನುಗಳಿಗೆ ಶೀಘ್ರದಲ್ಲೇ ಹರಿಯಲಿದೆ. ಇದರಿಂದ ಇನ್ನಷ್ಟು ಸಮೃದ್ಧವಾಗಿ ಬೆಳೆ ಬೆಳೆಯಲು ಅನುಕೂಲವಾಗಲಿದೆ ಎಂದರು. ಸಿಕಾರ್, ಜೈಪುರ, ಕೋಟ್‌ಪುಟ್ಲಿ ಸೇರಿ ರಾಜ್ಯದ ಇತರೆ ಜಿಲ್ಲೆಗಳಿಂದ ಆಗಮಿಸಿದ್ದ 35 ಸಾವಿರ ರೈತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಜುಂಝುನು ವೀರರು, ರೈತರ ಮತ್ತು ಲೋಕೋಪಕಾರಿಗಳ ಭೂಮಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರೊಂದಿಗೆ ದೃಢವಾಗಿ ನಿಂತಿದೆ. ಯಮುನಾ, ಚಂಬಲ್ ನೀರಿನ ಒಪ್ಪಂದ ಶೇಖಾವತಿ ರೈತರಿಗೆ ಪ್ರಯೋಜನವಾಗಿದೆ. ‘ಕಿಸಾನ್ ಸಮ್ಮಾನ್’ ಯೋಜನೆಯಡಿ ರೈತರ ಉತ್ಪನ್ನಗಳಿಗೆ ನ್ಯಾಯುತ ಬೆಲೆ ಸೇರಿ ಹಲವು ಪ್ರಯೋಜನಗಳಿವೆ.ಈ ಮೂಲಕ ಸ್ವಾವಲಂಬಿ ಭಾರತಕ್ಕೆ ಅಡಿಪಾಯ ಹಾಕಿದ್ದೇವೆ.

- ಭಜನ್ ಲಾಲ್ ಶರ್ಮಾ, ರಾಜಸ್ಥಾನ ಸಿಎಂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net