

ಗದಗ: ಗದಗ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಸೋಮವಾರ 2024-25ನೇ ಸಾಲಿನ ಮೊದಲ ಸೆಮಿಸ್ಟರ್ ಡಿಪ್ಲೋಮಾ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಎರಡು ವಾರಗಳ “ಇಂಡಕ್ಷನ್ ಪ್ರೊಗ್ರಾಂ” ಕಾರ್ಯಕ್ರಮವನ್ನು ಕಾಲೇಜಿನ ಪ್ರಾಚಾರ್ಯರಾದ ಭರಮಪ್ಪ ಬಡಪ್ಳವರ ಉದ್ಘಾಟಿಸಿದರು.
ಮೊದಲ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸರ್ಕಾರಿ ಪಾಲಿಟೆಕ್ನಿಕ್, ಗದಗ ಸಂಸ್ಥೆಯಲ್ಲಿ ಲಭ್ಯವಿರುವ ಅತ್ಯುತ್ತಮ ಸೌಲಭ್ಯಗಳಾದ ಅತೀ ಕಡಿಮೆ ಪ್ರವೇಶ ಶುಲ್ಕದಲ್ಲಿ ದೊರಕುವ ತಾಂತ್ರಿಕ ಶಿಕ್ಷಣ, ನುರಿತ ಅನುಭವಿ ಉಪನ್ಯಾಸಕ ವೃಂದ, ಸುಸಜ್ಜಿತ ಪ್ರಯೋಗಾಲಯ ಮತ್ತು ಗ್ರಂಥಾಲಯ, ವಾಚನಾಲಯ, ಪರೀಕ್ಷಾ ಪದ್ಧತಿ, ವಿವಿಧ ವಿದ್ಯಾರ್ಥಿ ವೇತನಗಳು, ಡಿಪ್ಲೋಮಾ ನಂತರ ವಿವಿಧ ಉದ್ಯೋಗಾವಕಾಶಗಳು, ಉನ್ನತ ವ್ಯಾಸಂಗದ ಅವಕಾಶ ಹಾಗೂ ಡಿಪ್ಲೊಮಾ- ಪಾಲಿಟೆಕ್ನಿಕ್ ತಾಂತ್ರಿಕ ಶಿಕ್ಷಣದ ಮಹತ್ವದ ಕುರಿತು ಸಮಗ್ರವಾದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಕಾರ್ಯಕ್ರಮದಲ್ಲಿ ವಿಭಾಗಾಧಿಕಾರಿಗಳಾದ ಕೊಟ್ರಗೌಡ (ಸಿವಿಲ್ ವಿಭಾಗ), ಸಂಗಪ್ಪ ಬಣ್ಣನ್ನವರ (ಮೆಕ್ಯಾನಿಕಲ್ ವಿಭಾಗ) ಮತ್ತು ಕಛೇರಿ ಅಧೀಕ್ಷಕರಾದ ವೀರೇಶ ಕಂಠಿಮಠ, ರಮೇಶ ಮಾವಿನಕಾಯಿ, ಉಪನ್ಯಾಸಕರುಗಳು, ಕಛೇರಿ ಸಿಬ್ಬಂದಿಗಳು, ಮೊದಲ ವರ್ಷದ ಎಲ್ಲ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವಿಭಾಗಾಧಿಕಾರಿ ಶ್ರೀಮತಿ ಜೈನಾಬಿ ( ಇ & ಸಿ) ಸ್ವಾಗತಿಸಿದರು. ಮಂಜುನಾಥ ಬಾಳಿಕಾಯಿ ಅತಿಥಿ ಉಪನ್ಯಾಸಕರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಮಂಗಳಗೌರಮ್ಮ ಶಿವಸಿಂಪಿಗೇರ (ಸಿ.ಎಸ್.ವಿಭಾಗ) ವಂದಿಸಿದರು.