

ಮೂಲ್ಕಿ: ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿ ಇಂದು ಎಂ.ನೇಮಕಗೊಂಡಿದ್ದಾರೆ. ಮೂಡುಬಿದಿರೆ ಪುರಸಭೆ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರನ್ನು ಹೆಚ್ಚುವರಿಯಾಗಿ ಕಿನ್ನಿಗೋಳಿ ಪಪಂ ಮುಖ್ಯಾಧಿಕಾರಿಯಾಗಿ ನೇಮಿಸಲಾಗಿದೆ.
ಈ ಹಿಂದೆ ಮೂಲ್ಕಿ ಪಪಂ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಮೂಲ್ಕಿ ನಗರವನ್ನು ಸ್ವಚ್ಛತೆ ಮೂಲಕ ಮಾದರಿಯಾಗಿಸಿ ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿ ಪಡೆದು ಜನಮನ್ನಣೆ ಗಳಿಸಿದ್ದರು.ಇತ್ತೀಚೆಗೆ ಕಿನ್ನಿಗೋಳಿ ಪಪಂಗೆ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ಗುತ್ತಿಗೆದಾರರಿಂದ ಲಂಚ ಸ್ವೀಕರಿಸುತ್ತಿದ್ದ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ಜೂನಿಯರ್ ಇಂಜಿನಿಯರ್ ನಾಗರಾಜ ಅವರನ್ನು ಬಂಧಿಸಿದ ಬಳಿಕ ಮುಖ್ಯಾಧಿಕಾರಿ ಸ್ಥಾನ ತೆರವಾಗಿತ್ತು.