

ಉಡುಪಿ: ಇಂದ್ರಾಣಿ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪರವೂರಿನಿಂದ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ದಾನಿಗಳ ನೆರವಿನಿಂದ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಇಂದ್ರಾಣಿ ಅತಿಥಿ ಗೃಹ ಭಾನುವಾರ ಉದ್ಘಾಟನೆಗೊಂಡಿತು.
ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅತಿಥಿ ಗೃಹವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ದಾನಿಗಳ ನೆರವಿನೊಂದಿಗೆ ಭಕ್ತರ ಅನುಕೂಲಕ್ಕಾಗಿ ಇಂದ್ರಾಣಿ ದೇವಳದಲ್ಲಿ ಅತಿಥಿಗೃಹ ನಿರ್ಮಿಸಿರುವುದು ಮಾದರಿ ಕಾರ್ಯ ಎಂದು ಶ್ಲಾಘಿಸಿದರು. ಇಂದ್ರಾಣಿ ಶ್ರೀಪಂಚದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಪ್ರಾಸ್ತಾವಿಸಿ, ಸ್ವಾಗತಿಸಿದರು. ಕರಾವಳಿ ಅಭಿವೃದ್ಧಿ ಪ್ರಾಕಾರ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭಾ ಸದಸ್ಯ ಅಶೋಕ್ ನಾಯ್ಕ, ಉದ್ಯಮಿಗಳಾದ ಬುಡ್ನಾರು ಜಯಕರ ಶೆಟ್ಟಿ, ಪಿ. ಪುರುಷೋತ್ತಮ್ ಶೆಟ್ಟಿ, ಯಶ್‌ಪಾಲ್ ಎ. ಸುವರ್ಣ, ಹಿರಿಯರಾದ ಜಯರಾಜ್ ಹೆಗ್ಡೆ, ಡಾ.ತನ್ಮಯ್ ಗೋಸ್ವಾಮಿ ಉಪಸ್ಥಿತರಿದ್ದರು. ರತ್ನಾಕರ ಇಂದ್ರಾಳಿ ಕಾರ‌್ಯಕ್ರಮ ನಿರೂಪಿಸಿದರು.