ಯಕ್ಷಗಾನ ಕಲೆ ಕರಾವಳಿ ಸಂಸ್ಕೃತಿಯ ಪ್ರತೀಕ

udp-17-yaksha
Published on

ಉಡುಪಿ: ಯಕ್ಷಗಾನ ಕಲೆ ಕರಾವಳಿ ಭಾಗದ ಸಾಂಸತಿಕ ಪ್ರತಿಕವಾಗಿದೆ. ಈಗಲೂ ಸಹ ಜನರ ಪ್ರೋತ್ಸಾಹ ಬೆಂಬಲ ಕಲೆ ಉಳಿದು ಬೆಳೆಯುವುದಕ್ಕೆ ಸಹಕಾರಿಯಾಗಿದೆ ಎಂದು ಮಾಹೆಯ ಕುಲಪತಿ ಡಾ. ಎಂ.ಡಿ ವೆಂಕಟೇಶ್​ ಹೇಳಿದರು.

ಉಡುಪಿ ಅಜ್ಜರಕಾಡಿನ ಪುರಭವನದಲ್ಲಿ ಇಂದ್ರಾಳಿ ಯಕ್ಷಗಾನ ಕೇಂದ್ರ ವತಿಯಿಂದ ಜಿ. ಶಂಕರ್​ ಫ್ಯಾಮಿಲಿ ಟ್ರಸ್ಟ್​ ಹಾಗೂ ಉಜ್ವಲ್​ ಡೆವಲಪರ್ಸ್​ ಸಹಕಾರದೊಂದಿಗೆ ನೀಡಲಾಗುವ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್​ ಪ್ರಾಯೋಜಿತ ಗುರು ಮಟಪಾಡಿ ವೀರಭದ್ರ ನಾಯಕ ಸ್ಮಾರಕ ಪ್ರಶಸ್ತಿಯನ್ನು ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರಿಗೆ ಪ್ರದಾನ ಮಾಡಿ ಅವರು ಮಾತನಾಡಿದರು.

ಮಾಹೆಯ ಸಹಕುಲಾಧಿಪತಿ ಹಾಗೂ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್​ನ ವಿಶ್ವಸ್ಥ ಡಾ. ಎಚ್​. ಎಸ್​. ಬಲ್ಲಾಳ್​ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

ಮಾಹೆಯ ಸಹಕುಲಪತಿ ಡಾ. ನಾರಾಯಣ ಸಭಾಹಿತ್​ ಹಾಗೂ ಜಿ.ಶಂಕರ್​ ಫ್ಯಾಮಿಲಿ ಟ್ರಸ್ಟ್​ನ ಪ್ರವರ್ತಕ ಡಾ. ಜಿ. ಶಂಕರ್​ ಶುಭ ಹಾರೈಸಿದರು. ಉಜ್ವಲ್​ ಡೆವಲಪ್ಪರ್ಸ್​ ಎಂ.ಡಿ ಪುರುಷೋತ್ತಮ ಶೆಟ್ಟಿ ಉಪಸ್ಥಿತರಿದ್ದರು. ಇಂದ್ರಾಳಿ ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಪಳ್ಳಿ ಕಿಶನ್​ ಹೆಗ್ಡೆ ಸ್ವಾಗತಿಸಿ ಪ್ರಸ್ತಾವನೆ ಗೈದರು. ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್​ ಶೆಟ್ಟಿ ಸಮ್ಮಾನ ಪತ್ರ ವಾಚಿಸಿ ನಿರೂಪಿಸಿದರು. ನಂತರ ಬಡಗುತಿಟ್ಟಿನ ಯಕ್ಷಗಾನ ಪ್ರದರ್ಶನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net