ಇಂದ್ರಾಳಿ ರೈಲ್ವೇ ಬ್ರಿಡ್ಜ್​ ನಿರ್ಮಾಣ ಘಟಕಕ್ಕೆ ಭೇಟಿ

udp-8-yashpal
Published on

ಉಡುಪಿ: ಇಂದ್ರಾಳಿ ರೈಲ್ವೇ ಸೇತುವೆ ಕಾಮಗಾರಿಗಾಗಿ ಧಾರವಾಡದ ಪದ್ಮಜಾ ಇಂಡಸ್ಟ್ರೀಸ್​ ನಲ್ಲಿ ಸಿದ್ಧಗೊಳ್ಳುತ್ತಿರುವ ಸ್ಟೀಲ್​ ಬ್ರಿಡ್ಜ್​ ನಿರ್ಮಾಣ ಘಟಕಕ್ಕೆ ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಸುಮಾರು 5.20 ಕೋಟಿ ವೆಚ್ಚದಲ್ಲಿ 54 ಮೀಟರ್​ ಉದ್ದ ಹಾಗೂ 12.5 ಮೀಟರ್​ ಅಗಲದ 385 ಟನ್​ ಸಾಮರ್ಥ್ಯದ ಸ್ಟೀಲ್​ ಬ್ರಿಡ್ಜ್​ ನಿರ್ಮಾಣ ಕೆಲಸ ಶೇ. 60ರಷ್ಟು ಪೂರ್ಣಗೊಂಡಿದ್ದು, ಹದಿನೈದು ದಿನಗಳಲ್ಲಿ ಶೇ. 80ರಷ್ಟು ಕಾರ್ಯ ಮುಗಿದ ಬಳಿಕ ರೈಲ್ವೇ ಇಲಾಖೆಯ ತಾಂತ್ರಿಕ ವಿಭಾಗ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಿದೆ. ಬಳಿಕ ಡಿಸೆಂಬರ್​ ಮೊದಲ ವಾರದಲ್ಲಿ ಇಂದ್ರಾಳಿಯಲ್ಲಿ ಸ್ಟೀಲ್​ ಬ್ರಿಡ್ಜ್​ ಅಳವಡಿಕೆ ಪ್ರಕ್ರಿಯೆ ನಡೆಯಲಿದ್ದು, ಆ ಬಳಿಕ ಸ್ಟೀಲ್​ ಬ್ರಿಡ್ಜ್​ ಮೇಲೆ 200 ಎಂ.ಎಂ. ಕಾಂಕ್ರೀಟಿಕರಣ ಮಾಡಲಾಗುತ್ತದೆ. ಡಿಸೆಂಬರ್​ ಕೊನೆಯ ವಾರದಲ್ಲಿ ಇಂದ್ರಾಳಿ ರೈಲ್ವೇ ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಜನವರಿಯಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎಂದು ಶಾಸಕ ಯಶ್​ ಪಾಲ್​ ಸುವರ್ಣ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸುಗ್ಗಿ ಸುಧಾಕರ ಶೆಟ್ಟಿ, ಮಹೇಶ್​ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net