ಇಂದ್ರಾಳಿ ಮೇಲ್ಸೇತುವೆ ತ್ವರಿತಗತಿ ಕಾಮಗಾರಿಗೆ ಸೂಚನೆ

udp-2-indrali dc
Published on

ಉಡುಪಿ: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ನಿಮಾರ್ಣದ ಅಂತಿಮ ಘಟ್ಟದ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು.

ಬುಧವಾರ ರಾಷ್ಟ್ರೀಯ ಹೆದ್ದಾರಿ 169ಎ ಇಂದ್ರಾಳಿ ಸಮೀಪದ ರೈಲ್ವೇ ಮೇಲ್ಸೇತುವೆ ಅಭಿವೃದ್ಧಿ ಕಾಮಗಾರಿ ಪ್ರಗತಿ ವೀಕ್ಷಿಸಿ ಮಾತನಾಡಿದರು. ರೈಲ್ವೇ ಮೇಲ್ಸೇತುವೆಯಾಗಿ ಕಬ್ಬಿಣದ ಗರ್ಡರ್​ ನಿಮಾರ್ಣದ ವೆಲ್ಡಿಂಗ್​ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ರೈಲ್ವೆ ಇಲಾಖೆಯ ವತಿಯಿಂದ ವೆಲ್ಡಿಂಗ್​ ಕಾರ್ಯದ ಗುಣಮಟ್ಟವನ್ನು ಸ್ಥಳಿಯವಾಗಿ ಪರಿಶೀಲನೆ ನಡೆಸಲಾಗಿದೆ. ಅಂತಿಮವಾಗಿ ಲಕ್ನೋ ರೈಲ್ವೇ ಡಿಸೈನ್​ ಮತ್ತು ಸೇಫ್ಟಿ ಆರ್ಗನೈಸೇಷನ್​ ತ್ವರಿತವಾಗಿ ಕೈಗೊಳ್ಳಬೇಕು ಎಂದರು.

ಸಾಧನ ಸಿದ್ಧಗಿಟ್ಟುಕೊಳ್ಳಿ

ರೈಲ್ವೇ ಮೇಲ್ಸೇತುವೆ ಅಳವಡಿಸಲು ಅಗತ್ಯವಿರುವ ಬೃಹತ್​ ಕೆನ್​ಗಳು, ಜಾಕ್​ಗಳು, ರೋಲರ್​ಗಳು, ರೇಲ್ಸ್​ಗಳು ಸೇರಿದಂತೆ ಮತ್ತಿತರ ಅವಶ್ಯವಿರುವ ಸಾಧನಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು. ಸುರಕ್ಷಿತವಾಗಿ ಕಾಮಗಾರಿಗಳನ್ನು ಕೈಗೊಳ್ಳಲು ಅಗತ್ಯವಿರುವ ಮುಂಜಾಗ್ರತಾ ಕ್ರಮಗಳನ್ನು ಸಹ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್​ ಅಧೀಕ್ಷಕ ಡಾ. ಅರುಣ್​ ಕೆ., ಕೊಂಕಣ ರೈಲ್ವೆಯ ಸೀನೀಯರ್​ ಇಂಜಿನಿಯರ್​ ಗೋಪಾಲಕೃಷ್ಣ, ಲೋಕೋಪಯೋಗಿ ಇಲಾಖೆಯ ಎ.ಇ ಮಂಜುನಾಥ್​, ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net