ಇಂದ್ರಧನುಷ್ ಅಭಿಯಾನ ಮಹತ್ವದ ಹೆಜ್ಜೆ

Indradhanush
Published on

ಹಿರೇಕೆರೂರ: ಮಕ್ಕಳ ಆರೋಗ್ಯದಲ್ಲಿ ಇಂದ್ರಧನುಷ್ ಅಭಿಯಾನ ಮಹತ್ವದ ಹೆಜ್ಜೆಯಾಗಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಮಿಷನ್ ಇಂದ್ರಧನುಷ್ 5.0 ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದಡಾರ ಮತ್ತು ರುಬೆಲ್ಲಾ ರೋಗ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಭಿಯಾನ ಹಮ್ಮಿಕೊಂಡಿದೆ. ಪಲ್ಸ್ ಪೊಲಿಯೋದಂತೆ ಇದೂ ಯಶಸ್ವಿಯಾಗಲಿ ಎಂದರು.

ತಾಲೂಕು ಆರೋಗ್ಯಧಿಕಾರಿ ಡಾ. ನೀಲಕಂಠಸ್ವಾಮಿ ನ್ಯಾಮತಿ ಮಾತನಾಡಿ, ಇಂದ್ರಧನುಷ್ ಲಸಿಕಾ ಅಭಿಯಾನ ಸಪ್ತಾಹವನ್ನು ಮೂರು ಹಂತದಲ್ಲಿ ಏರ್ಪಡಿಸಲಾಗಿದೆ. ಐದು ವರ್ಷದೊಳಗಿನ ಪ್ರತಿ ಮಗುವಿಗೆ ಲಸಿಕೆ ನೀಡಲು ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಶ್ರಮಿಸುತ್ತಿದ್ದಾರೆ ಎಂದರು.
ತಹಸೀಲ್ದಾರ್ ಎಚ್. ಪ್ರಭಾಕರಗೌಡ, ಬಿಇಒ ಎನ್. ಶ್ರೀಧರ, ಪಪಂ ಸದಸ್ಯರಾದ ಸನಾವುಲ್ಲಾ ಮಕಾನದಾರ, ರಮೇಶ ಕೋಡಿಹಳ್ಳಿ, ಸುಧಾ ಚಿಂದಿ, ಕವಿತಾ ಹಾರ್ನಳ್ಳಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಝಾಕೀರ್ ಹುಸೇನ್, ಶಿವಪ್ರಸಾದ ಎಚ್., ಬಿ.ಎಸ್., ಗೀತಾ ಬಾಳಿಕಾಯಿ, ಡಾ. ಹೊನ್ನಪ್ಪ ಜೆ.ಎಂ., ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net