

ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲೆಯಾದ್ಯಂತ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಂದು ಮನೆಯನ್ನು ಸಮೀೆ ಮಾಡಿ, ತಾಯಿ ಕಾರ್ಡನ್ನು ಪರಿಶೀಲಿಸಿ ಇಂದ್ರ ಧನುಷ್ ಲಸಿಕೆಯಿಂದ ವಂಚಿತವಾದ ಮಗುವನ್ನು ಗುರುತಿಸಿ ಲಸಿಕೆ ನೀಡಬೇಕು. ಲಸಿಕೆ ನೀಡಿದ್ದರ ಕುರಿತು ತಾಯಿಕಾರ್ಡನಲ್ಲಿ ಕೂಡಲೇ ನಮೂದಿಸಬೇಕು ಎಂದು ಜಿಲ್ಲಾದಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಿಶನ್ ಇಂದ್ರಧನುಷ್ ಕಾರ್ಯಕ್ರಮ ಅನುಷ್ಟಾನ ಕುರಿತು ಶುಕ್ರವಾರ ಜರುಗಿದ ಟಾಸ್ಕ್ ೋರ್ಸ ಸಮಿತಿ ಸಭೆಯ ಅಧ್ಯತೆ ವಹಿಸಿ ಮಾತನಾಡಿ, ಮಗು ಹಾಗೂ ಗಭಿರ್ಣಿ ಮಹಿಳೆಯರು ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸೂಕ್ತ ಕ್ರೀಯಾ ಯೋಜನೆ ತಯಾರಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯ ಪಡೆಯಬೇಕು. ವ್ಯಾಕ್ಸಿನೇಷನ್ ಕೇಂದ್ರ ನಿಮಿರ್ಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗದೀಶ ನುಚ್ಚಿನ್ ಮಾತನಾಡಿ, ತೀವ್ರತರ ಇಂದ್ರ ಧನುಷ್ ಅಭಿಯಾನ ಮೂರು ಸುತ್ತುಗಳನ್ನೊಳಗೊಂಡಿದ್ದು ಜಿಲ್ಲೆಯಲ್ಲಿ 5 ವರ್ಷದ ಒಳಗಿನ ಎಲ್ಲ ಮಕ್ಕಳು ಅಥವಾ ಗಭಿರ್ಣಿ ಮಹಿಳೆ ಲಸಿಕೆಯಿಂದ ವಂಚಿತರಾಗದಂತೆ ಕ್ರಮವಹಿಸಲಾಗಿದೆ ಎಂದರು.
ಜಿಲ್ಲಾ ಆರ್ಸಿಹೆಚ್ಅಧಿಕಾರಿ ಡಾ. ಬಿ.ಎಂ. ಗೊಜನೂರ ಮಾತನಾಡಿ, ಆ. 7 ರಿಂದ 12 ರವರೆಗೆ ಮೊದಲನೇ ಸುತ್ತು, ಸೆ.11 ರಿಂದ 16 ರವರೆಗೆ ಎರಡನೇ ಸುತ್ತು, ಅ. 9 ರಿಂದ 14 ರವರೆಗೆ ಮೂರನೇ ಸುತ್ತು ಅಭಿಯಾನ ಅನುಷ್ಠಾನಗೊಳಿಸುತ್ತಿದ್ದು, ಕಡ್ಡಾಯವಾಗಿ ಎಲ್ಲ ಮನೆಗಳ ಭೇಟಿ ಮಾಡಿ ಲಸಿಕೆ ಬಿಟ್ಟುಹೋದ ಅಥವಾ ತಪ್ಪಿಹೋದ ಮಕ್ಕಳ ಮತ್ತು ಗಭಿರ್ಣಿ ಮಹಿಳೆಯರಿಗೆ ಲಸಿಕೆ ಪಡೆಯುವಂತೆ ಕಾರ್ಯಕ್ರಮ ಜರುಗಿಸಲಾಗುವುದು ಎಂದರು.
ಡಾ. ಮುಕುಂದ್ ಗಲಗಲಿ ಮಾತನಾಡಿ, ವಲಸಿಗರನ್ನು ಹೊಂದಿರುವ ನಗರ ಪ್ರದೇಶದ ಸ್ಲಂಗಳು, ಅಲೆಮಾರಿಗಳು ವಾಸಿಸುವ ಸ್ಥಳಗಳು, ಇಟ್ಟಿಗೆ ಸುಡುವ ಜಾಗಗಳು, ಕಟ್ಟಡ ನಿರ್ಮಾಣ ಪ್ರದೇಶಗಳು, ಮೀನುಗಾರರು ವಾಸಿಸುವ ಸ್ಥಳಗಳು, ಬುಡಕಟ್ಟು ಜನಾಂಗಗಳು, ಗುಡ್ಡಗಾಡು ಪ್ರದೇಶಗಳು ಇತ್ಯಾದಿ, ನಗರ ಪ್ರದೇಶದ ಸುತ್ತಮುತ್ತಲಿನ ಮೊಹಲ್ಲಾಗಳು, ದಡಾರ, ಗಂಟಲುಮಾರಿ ಮತ್ತು ಧನುರ್ವಾಯು ಪ್ರಕರಣಗಳು ವರದಿಯಾದ ಪ್ರದೇಶಗಳು, ವಲಸೆ ರಹಿತ ಆದರೆ ಹೆಚ್ಚಿನ ಅಪಾಯದ ಪ್ರದೇಶಗಳು, ನಗರ ಕೊಳಗೇರಿಗಳು, ವಿಪಿಡಿ ಪ್ರಕರಣವಿರುವ ಪ್ರದೇಶ, ಲಸಿಕೆ ವಿರೋಧ ಅಥವಾ ನಿರಾಕರಣೆ ಪ್ರದೇಶಗಳು, ಇತರೆ ಅಪಾಯದ ಅಂಚಿನಲ್ಲಿರುವ ಪ್ರದೇಶಗಳಲ್ಲಿ ವಿಷೇಶವಾದ ಗಮನಹರಿಸಿ ಜಿಲ್ಲೆಯಲ್ಲಿ ಲಸಿಕೆ ಕಾರ್ಯಕ್ರಮ ಜರುಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮ ಅನುಷ್ಠಾನದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕ ಪಿ. ವೈ.ಶೆಟ್ಟೆಪ್ಪನವರ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ಡಾ. ಎಸ್.ಎಸ್.ನೀಲಗುಂದ ಸೇರಿದಂತೆ ಹಲವರು ಇದ್ದರು.