ಇಂದ್ರ ಧನುಷ್‍ ಲಸಿಕಾ ಅಭಿಯಾನಕ್ಕೆ ಸಚಿವ ಎಚ್.ಕೆ.ಪಾಟೀಲ ಚಾಲನೆ

07GDG01
Published on

ಗದಗ: ವಯೋಮಾನದ ಮಕ್ಕಳಿಗೆ ನಿಯಮಿತವಾಗಿ ನೀಡುವ ಲಸಿಕೆಗಳನ್ನು ತಪ್ಪದೇ ಹಾಕಿಸಬೇಕು. ಒಂದು ವೇಳೆ ಲಸಿಕೆ ಹಾಕಿಸದೇ ಇದ್ದಲ್ಲಿ ಇಂಧ್ರ ಧನುಷ್ ಲಸಿಕಾ ಅಭಿಯಾನ ಜಿಲ್ಲೆಯಲ್ಲಿ ಆರಂಭವಾಗಿದ್ದು ಮಕ್ಕಳಿಗೆ ಈ ಲಸಿಕೆಯನ್ನು ಕೊಡಿಸುವ ಮೂಲಕ ರೋಗಗಳಿಂದ ಮುಕ್ತರಾಗಿಸಬೇಕು ಎಂದು ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ಹೇಳಿದರು.

ನಗರದ ದುಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾಪಂಚಾಯತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಲಾದ ಇಂದ್ರಧನುಷ್‍ಲಸಿಕಾ ಅಭಿಯಾನಕ್ಕೆ ಚಾಲನೇ ನೀಡಿ ಅವರು ಮಾತನಾಡಿದರು.

ಇಂದ್ರಧನುಷ್ ಲಸಿಕಾ ಅಭಿಯಾನದಡಿ ಪೋಲಿಯೋ, ಡಿಪ್ತಿರಿಯಾ, ನಾಯಿಕೆಮ್ಮು, ಧನುರ್ವಾಯು, ಕ್ಷಯರೋಗ, ದಡಾರ, ಮೇನಿಂಜೈಟಿಸ್, ಹೆಪಾಟೈಟಿಸ್ ಬಿ, ರುಬೇಲಾ ಲಸಿಕೆಗಳನ್ನು ನೀಡಲಾಗುತ್ತಿದೆ. ತಪ್ಪದೇ 0-5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಕೊಡಿಸಬೇಕು. ಅನೇಕ ರೋಗಗಳಿಂದ ಈ ಲಸಿಕೆಗಳು ಮಕ್ಕಳನ್ನು ಆರೋಗ್ಯವಂತರಾಗಿರಲು ಕಾರ್ಯನಿರ್ವಹಿಸುತ್ತವೆ ಎಂದರು.

ಪೋಲಿಯೋದಂತಹ ಮಹಾಮಾರಿಯು ದೇಶದಲ್ಲಿ ಅನೇಕ ದುಶ್ಪರಿಣಾಮಗಳನ್ನು ಮಾಡಿದ್ದು, ಅದಕ್ಕೆ ಲಸಿಕೆ ಕಂಡು ಹಿಡಿದು ನಿರಂತರವಾಗಿ ಲಸಿಕಾ ಅಭಿಯಾನ ನಡೆಸುವ ಮೂಲಕ ಇಂದು ದೇಶದಲ್ಲಿ ಪೊಲಿಯೋ ನಿರ್ನಾಮವಾಗಿದೆ ಎಂದು ನಾವೆಲ್ಲರೂ ಅರಿತು ಮಕ್ಕಳಿಗೆ ಸಂದರ್ಭಾನುಸಾರ ಲಸಿಕೆಗಳನ್ನು ಕೊಡಿಸುವದನ್ನು ಮರೆಯಬಾರದು ಎಂದರು.

ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್.ಅವರು ಮಾತನಾಡಿ ದೇಶದಲ್ಲಿ 2014 ರಿಂದ ಮಿಷನ್ ಇಂದ್ರಧನುಷ ಕಾರ್ಯಕ್ರಮ ಆರಂಭವಾಗಿದೆ. ಲಸಿಕಾ ವಂಚಿತ 5 ವರ್ಷದೊಳಗಿನ ಎಲ್ಲ ಮಕ್ಕಳೂ ಹಾಗೂ ಗರ್ಭಿಣಿಯರಿಗೆ ಲಸಿಕೆಯನ್ನು ಆರೋಗ್ಯ ಸಿಬ್ಬಂದಿ, ವೈದ್ಯಾಧಿಕಾರಿಗಳು, ಖಾಸಗಿ ಆಸ್ಪತ್ರೆಗಳು, ಸಂಘ ಸಂಸ್ಥೆಗಳು ಮತ್ತು ಆಶಾ ಕಾರ್ಯಕರ್ತೆಯರ ಸಹಯೋಗದೊಂದಿಗೆ ನಿಗದಿತ ಗುರಿ ಮುಟ್ಟುವಂತೆ ಸೂಚಿಸಿದರು. ಲಸಿಕೆ ಹಾಕಿಸುವದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುವ ಮೂಲಕ ಆರೋಗ್ಯಯುತ ಜೀವನ ನಡೆಸಲು ಸಾಧ್ಯವಾಗುತ್ತದೆ. ನಿಮ್ಮ ಮಕ್ಕಲಿಗೆ ತಪ್ಪದೇ ಲಸಿಕೆ ಹಾಕಿಸಬೇಕು ಎಂದು ನೆರೆದ ತಾಯಂದರಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಗದಗ ವೈದ್ಯಕೀಯ ಶಿಕ್ಷಣಗಳ ಸಂಸ್ಥೆ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಗದೀಶ ನುಚ್ಚಿನ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಿ.ಸಿ.ಕರಿಗೌಡರ, ಆರ್.ಸಿ.ಎಚ್. ಅಧಿಕಾರಿ ಡಾ. ರಾಜೇಶ ಗೊಜನೂರ, ಡಿ.ಎಂ.ಓ, ಡಾ.ಎಸ್.ಎಸ್.ನೀಲಗುಂದ, ಡಾ.ಜಿ.ಎಸ್.ಪಲ್ಲೇದ, ಡಾ. ಪ್ರೀತಮ ಖೋನಾ, ಡಾ. ಸೋಮಶೇಖರ ಬಿಜ್ಜಳ, ಡಾ.ವೆಂಕಟೇಶ ರಾಠೋಡ ಸೇರಿದಂತೆ ಗಣ್ಯರು, ಸಾರ್ವಜನಿಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net