ಆ.೬ರಂದು ಪತ್ರಕರ್ತರಿಗೆ ಒಳಾಂಗಣ ಕ್ರೀಡಾ ಸ್ಪರ್ಧೆಗಳು

321159052_191431026881651_2861282683719647674_n
Published on

ಮಡಿಕೇರಿ: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ(ರಿ), ಸಂಘದ ಕ್ರೀಡಾ ಸಮಿತಿ ಹಾಗೂ ಕೊಡಗು ಪ್ರೆಸ್‌ಕ್ಲಬ್ ಬೆಳ್ಳಿಮಹೋತ್ಸವ ಕ್ರೀಡಾ ಸಮಿತಿ ಆಶ್ರಯದಲ್ಲಿ ಇದೇ ಆಗಸ್ಟ್ ೫ರಂದು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗಾಗಿ ಒಳಾಂಗಣ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಎಂದು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕ್ರೀಡಾ ಸಮಿತಿ ಸಂಚಾಲಕ ಮಂಜು ಸುವರ್ಣ ಹಾಗೂ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿಮಹೋತ್ಸವ ಕ್ರೀಡಾ ಸಮಿತಿ ಸಂಚಾಲಕ ಸಂತೋಷ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಚೆಸ್, ಟೇಬಲ್ ಟೆನ್ನಿಸ್, ಕೇರಂ ಮತ್ತು ಮೈಂಡ್ ಗೇಮ್ ಸ್ಪರ್ಧೆಗಳು ನಡೆಯಲಿವೆ. ಟೇಬಲ್ ಟೆನಿಸ್‌ನಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಹಾಗೂ ಮಹಿಳೆಯರಿಗೆ ಸಿಂಗಲ್ಸ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಟೇಬಲ್ ಟೆನಿಸ್ ಮತ್ತು ಕೇರಂ ಡಬಲ್ಸ್‌ಗೆ ಸ್ಪರ್ಧಿಗಳೇ ಜೋಡಿಯನ್ನು ಆಯ್ಕೆ ಮಾಡಿಕೊಳ್ಳಬೇಕು.


ಪ್ರವೇಶ ಶುಲ್ಕ ೧೦೦ ರೂ. ನಿಗದಿಪಡಿಸಲಾಗಿದ್ದು, ಹೆಸರು ನೋಂದಾವಣೆಗೆ ಕೊನೇ ದಿನ ಆ.೧ ಸಂಜೆ ೫ ಗಂಟೆಯಾಗಿದೆ. ಸ್ಪರ್ಧಿಗಳು ನವೀನ್ ಸುವರ್ಣ(೯೮೮೦೧೯೧೫೬೬) ಅವರಲ್ಲಿ ಹೆಸರು ನೋಂದಾಯಿಸಿಕೊಂಡು, ಅದೇ ಮೊಬೈಲ್ ಸಂಖ್ಯೆಗೆ ಪ್ರವೇಶ ಶುಲ್ಕದ ಹಣವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net