ಶಿವಣ್ಣ ಗೌಡಗೆ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ

shivanna gouda YLP
Published on

ಯಲ್ಲಾಪುರ: ಇಲ್ಲಿನ ಅರಣ್ಯ ಇಲಾಖೆಯ ನೌಕರ ಶಿವಣ್ಣ ಗೌಡ ಬೀರಗದ್ದೆ ಅವರು ರಾಜ್ಯಮಟ್ಟದ ಅರಣ್ಯ ಇಲಾಖಾ ಕ್ರೀಡಾಕೂಟದಲ್ಲಿ ವೈಯಕ್ತಿಕ ವೀರಾಗ್ರಣಿಯಾಗಿ ಹೊರಹೊಮ್ಮಿದ್ದಾರೆ. ಕಲಬುರಗಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ 100 ಮೀ. ಓಟ, 200 ಮೀ. ಓಟ, 110 ಮೀ ಹರ್ಡಲ್ಸ್ ಸ್ಪರ್ಧೆಯಲ್ಲಿ ಬಂಗಾರದ ಪದಕ ಪಡೆದಿದ್ದಾರೆ. ಹ್ಯಾಮರ್ ಹಾಗೂ ಚಕ್ರ ಎಸೆತದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ವೈಯಕ್ತಿಕ ವೀರಾಗ್ರಣಿಯಾಗುವ ಮೂಲಕ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net