

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಳ್ನಾವರ ತಾಲೂಕಿನ ಸುತ್ತಮುತ್ತಲು ಅತಿಯಾದ ಮಳೆಯಿಂದಾಗಿ ಅಳ್ನಾವರ ತಾಲೂಕಿನ ಹುಲಿಕೇರಿ ಗ್ರಾಮದಲ್ಲಿರುವ ಇಂದಿರಮ್ಮನ ಕೆರೆ ತುಂಬಿದೆ. ಕೆರೆ ನಾಲೆಯಿಂದ ಹಾಗೂ ಕೆರೆ ಸೇತುವೆ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಪ್ರವಾಹದ ಸಂಭವ ಇದೆ.
ಕೆರೆ ಅಕ್ಕಪಕ್ಕದಲ್ಲಿರುವ ಜಮೀನುಗಳ ರೈತರು ದನ ಕರುಗಳನ್ನು ಕೆರೆಯ ಹತ್ತಿರ ಬಿಡಬಾರದು. ರೈತರು ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ಇಂದಿರಮ್ಮನ ಕೆರೆ ವೀಕ್ಷಣೆಗೆ ಜನರು ತೆರಳುತ್ತಿದ್ದು, ಕೆರೆ ಅಕ್ಕ ಪಕ್ಕದಲ್ಲಿ ನೀರಿನ ಪ್ರವಾಹ ಬರುವ ಸಂಭವ ಇರುವುದರಿಂದ ವೀಕ್ಷಣೆಗೆ ನಿರ್ಬಂಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.