ಇಂದಿರಾ ಕ್ಯಾಂಟಿನ್‌ಗೆ ನುಗ್ಗಿದ ಮಳೆ ನೀರು

16 snd 06
ಸಿಂಧನೂರು ಬಸ್ ನಿಲ್ದಾಣ ರಸ್ತೆಯ ಇಂದಿರಾ ಕ್ಯಾಂಟಿನ್‌ನೊಳಗೆ ಮಳೆ ನೀರು ನುಗ್ಗಿರುವುದು.
Published on

ಸಿಂಧನೂರು: ನಗರದಲ್ಲಿ ಸಂಜೆ ಒಂದು ತಾಸು ಮಳೆ ಸುರಿದ ಪರಿಣಾಮ ಇಂದಿರಾ ಕ್ಯಾಂಟಿನ್ ಕಟ್ಟಡಕ್ಕೆ ನೀರು ನುಗ್ಗಿದವು. ಸಂಜೆ ಏಕಾಏಕಿ ಸುರಿದ ಮಳೆಯಿಂದ ನಗರದ ಕುಷ್ಟಗಿ ರಸ್ತೆ, ರಾಯಚೂರು ರಸ್ತೆ ಹಾಗೂ ಪಿಡಬ್ಲ್ಯುಡಿ ಕ್ಯಾಂಪ್‌ನ ಯಲ್ಲಮ್ಮದೇವಿ ದೇವಸ್ಥಾನದ ಮುಂದಿನ ರಸ್ತೆಗಳೆಲ್ಲ ಜಲಾವೃತವಾದವು.

ನಗರದ ಬಸ್ ನಿಲ್ದಾಣ ಬಳಿ ಇಂದಿರಾ ಕ್ಯಾಂಟಿನ್ ಕಟ್ಟಡದ ಆವರಣ, ಅಡುಗೆ ಕೋಣೆ, ಊಟದ ಸಭಾಂಗಣದೊಳಗೆ ಮಳೆ ನೀರು ನುಗ್ಗಿ ಅಸ್ತವ್ಯಸ್ತವಾಗಿದ್ದರಿಂದ ಸಿಬ್ಬಂದಿ ನೀರನ್ನು ಹೊರ ಹಾಕಿದರು. ನಗರದ ಆದರ್ಶ ಕಾಲನಿಯಲ್ಲಿನ ಲೋಕೋಪಯೋಗಿ ಇಲಾಖೆ ವಸತಿ ಗೃಹಗಳ ಸ್ಥಳದಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡು ಜನ ಜೀವನ ಅಸ್ತವ್ಯಸ್ತಗೊಳಿಸಿದ್ದು ಮನೆಗಳ ಆವರಣಕ್ಕೂ ನೀರು ನುಗ್ಗಿದೆ.

ಮಳೆ ನೀರಿನಿಂದ ಆಗುತ್ತಿರುವ ತೊಂದರೆ ಕುರಿತು ಈಗಾಗಲೇ ನಗರಸಭೆ ಹಾಗೂ ಪಿಡಬ್ಲ್ಯುಡಿ ಇಲಾಖೆಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಜನರೊಂದಿಗೆ ಬೀದಿಗಿಳಿದು ಹೋರಾಟ ಮಾಡುವುದಷ್ಟೇ ಬಾಕಿ ಇದೆ ಎಂದು ಉದ್ಯಮಿ ಅಮರೇಗೌಡ ಕಾನಿಹಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net