

ಕಂಪ್ಲಿ: ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಜಾಗ ಆಯ್ಕೆ ಮಾಡಿ ವರ್ಷವಾಗಿದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಅಮೆ ಗತಿಯಲ್ಲಿ ಸಾಗುತ್ತಿದ್ದ ಕಾಮಗಾರಿಗೆ ಮತ್ತೇ ಜೀವ ಬಂದಂತೆ ರೂಫ್ ವರ್ಕ್ ಆರಂಭವಾಗಿದೆ.
ಇದನ್ನೂ ಓದಿ: ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ
ಹಳೇ ಬಸ್‌ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್‌ನ ಪಿಇಬಿ ಕಟ್ಟಡ ಅರೆಬರೆ ನಿರ್ಮಾಣವಾಗಿದೆ. ಇದೀಗ ಪ್ಲಂಬಿಂಗ್ ವರ್ಕ್ಸ್, ಡೋರ್, ವಿಂಡೋ ವರ್ಕ್, ಗ್ಯಾನ್ ಲೈನ್ ಪೂರ್ಣವಾಗಿದ್ದು, ಸದ್ಯ ರೂಫ್ ವರ್ಕ್ ಸಾಗಿದೆ. ಎಲೆಕ್ಟ್ರಿಕಲ್ ವರ್ಕ್‌ಗಾಗಿ ಪೈಪ್ ಲೈನ್ ಹಾಕಲಾಗಿದ್ದು, ಫ್ಯಾಬ್ರಿಕೇಷನ್, ಫ್ರೋರಿಂಗ್, ವಾಟರ್‌ಟ್ಯಾಂಕ್ ಕೆಲಸ ಬಾಕಿ ಇದೆ.
ಗುತ್ತಿಗೆದಾರರ ಉದಾಸೀನತೆಯಿಂದ ಇಂದಿರಾ ಕ್ಯಾಂಟೀನ್ ಕಟ್ಟಡ ಪೂರ್ಣಗೊಳ್ಳುತ್ತಿಲ್ಲ. ಕೂಡಲೇ ಕ್ಯಾಂಟೀನ್ ಆರಂಭಕ್ಕೆ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿದಿಗಳು ಮುಂದಾಗಬೇಕು ಎಂದು ಕಾರ್ಮಿಕ ಮುಖಂಡರಾದ ಬಂಡಿ ಬಸವರಾಜ, ಮುನಿಸ್ವಾಮಿ, ಬಾಬು ಇತರರು ಒತ್ತಾಯಿಸಿದ್ದಾರೆ.