ಶೀಘ್ರದಲ್ಲೇ ಇಂದಿರಾ ಕ್ಯಾಂಟೀನ್ ಆರಂಭ

Indira canteen will start soon
ಇಳಕಲ್ಲ ನಗರದಲ್ಲಿ ಮಂಗಳವಾರ ಇಂದಿರಾ ಕ್ಯಾಂಟೀನ್ ಕಟ್ಟಡ ಕಾಮಗಾರಿಗೆ ಶಾಸಕ ವಿಜಯಾನಂದ ಕಾಶಪ್ಪನವರ ಭೂಮಿಪೂಜೆ ನೆರವೇರಿಸಿದರು. ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ, ಮ್ಯಾನೇಜರ್ ಎಸ್.ಎಚ್. ಚೆನ್ನಬಸನಗೌಡ ಆರ್.ಐ., ಪರಶುರಾಮ ನಾರಾಯಣ ಇತರರಿದ್ದರು.
Published on

ಇಲಕಲ್ಲ: ಬಡವರ ಹಸಿವು ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗುತ್ತಿದ್ದು, ಅತಿ ಶೀಘ್ರದಲ್ಲೇ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಾಸಕ ವಿಜಯಾನಂದ ಎಸ್.ಕಾಶಪ್ಪನವರ ಹೇಳಿದರು.

ನಗರದ ಮುಖ್ಯರಸ್ತೆ ಮುಖ್ಯ ರಸ್ತೆಯಲ್ಲಿನ ಬಸ್ ನಿಲ್ದಾಣದ ಮುಂಭಾಗದಲ್ಲಿ ಹಳೇ ಪೋಲಿಸ್ ಠಾಣೆ ಪಕ್ಕದಲ್ಲಿ ಕ್ಯಾಂಟೀನ್ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಪಟ್ಟಣಕ್ಕೆ ಈ ಹಿಂದೆಯೇ ಕ್ಯಾಂಟೀನ್ ಕಟ್ಟಲು ಅನುಮೋದನೆ ದೊರಕಿತ್ತು. ಆದರೆ, ಹಿಂದಿನ ಸರ್ಕಾರಗಳು ದುರುದ್ದೇಶದಿಂದ ಇಂದಿರಾ ಕ್ಯಾಂಟೀನ್ ಮಾಡಲು ಬಿಡಲಿಲ್ಲ. ಆದ್ದರಿಂದ ಇಷ್ಟು ತಡವಾಯಿತು ಎಂದು ತಿಳಿಸಿದರು.

ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ, ಮ್ಯಾನೇಜರ್ ಎಸ್.ಎಚ್. ಚೆನ್ನಬಸನಗೌಡ ಆರ್.ಐ., ಪರಶುರಾಮ ನಾರಾಯಣ, ನಗರಸಭೆ ಸದಸ್ಯರಾದ ಮೌಲೇಶ ಬಂಡಿವಡ್ಡರ, ರೇಷ್ಮಾ ಮಾರನಬಸರಿ, ಸೋನಾರ, ಬನ್ನಿಗೋಳ, ನಾಮನಿರ್ದೇಶಕ ಸದಸ್ಯರಾದ ಮಲ್ಲು ಮಡಿವಾಳರ, ಅಬ್ಬೂ ಹಳ್ಳಿ, ರಾಧೇಶ್ಯಾಮ್ ಧರಕ್, ಮಹಾಂತೇಶ ನರಗುಂದ, ಬಸವರಾಜ ನಾಲವಾಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net