

ಕಂಪ್ಲಿ: ಇಲ್ಲಿನ ತುಂಗಭದ್ರಾ ನದಿಗೆ ನೂತನ ಸೇತುವೆ ನಿರ್ಮಿಸುವ ಕುರಿತು ಅಧಿವೇಶನದಲ್ಲಿ ಚರ್ಚಿಸಿ ಅನುದಾನ ಬಿಡುಗಡೆಗೆ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.
ಇದನ್ನೂ ಓದಿ: ಇಂದಿರಾ ಕ್ಯಾಂಟೀನ್ ಕಾಯಕಲ್ಪ ನಿರೀಕ್ಷೆ
ತಾಲೂಕಿನ ನಂ.2ಮುದ್ದಾಪುರ ಗ್ರಾಮಕ್ಕೆ ಶನಿವಾರ ಭೇಟಿ ನೀಡಿ ವೇಳೆ ಮಾತನಾಡಿ, ಈ ಹಿಂದೆ ಬಿ.ಶ್ರೀರಾಮುಲು ಸೇತುವೆಗೆ ಅನುದಾನ ಮಂಜೂರಾಗಿದೆ ಎಂದು ಹೇಳಿದ್ದು, ಇದನ್ನು ಅಧಿವೇಶನದಲ್ಲಿ ವಿಚಾರಿಸುತ್ತೇನೆ. ಈಗಿನ ಸೇತುವೆ ಶಿಥಿಲಗೊಂಡಿದ್ದು ನೂತನ ಸೇತುವೆ ನಿರ್ಮಾಣ ಅಗತ್ಯವಿದೆ.
ಈ ಹಿಂದೆಯೂ ನಾನು ಅಧಿವೇಶನದಲ್ಲಿಯೂ ಕೂಡಾ ಚರ್ಚಿಸಿದ್ದೇನೆ. ಕಂಪ್ಲಿ ಸಕ್ಕರೆ ಕಾರ್ಖಾನೆಯ 176ಎಕರೆ ಜಮೀನು ಮರು ವಶ, ಕಂಪ್ಲಿ ಮೂಲಕ ದರೋಜಿ-ಗಂಗಾವತಿ ರೈಲ್ವೆ ಬ್ರಾಡ್‌ಗೇಜ್ ಹಳಿ ಸಂಪರ್ಕ ಸೇರಿ ಕೆಲ ವಿಚಾರಗಳು ಸರ್ಕಾರದ ಮಟ್ಟದಲ್ಲಿ ಚಿಂತನೆಯಾಗಬೇಕಿದೆ. ಇಂದಿರಾ ಕ್ಯಾಂಟೀನ್ ಆರಂಭಕ್ಕೂ ಚಿಂತನೆ ನಡೆಸಲಾಗುವುದು. ಶೀಘ್ರದಲ್ಲಿಯೇ ಕೆಡಿಪಿ ಸಭೆ ಕರೆಯಲಾಗುವುದು. ಗ್ರಾಮಗಳಲ್ಲಿನ ಮೂಲಸೌಕರ್ಯ ಸಮಸ್ಯೆ, ರೈತರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.