ಇಂದಿರಾ ಕ್ಯಾಂಟೀನ್ ಸುತ್ತ ಗಿಡಗಂಟಿ

20 KOTTUR 01
ಕೊಟ್ಟೂರಿನ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್ ಕಟ್ಟಡದ ಸುತ್ತ ಗಿಡಗಂಟಿ ಬೆಳೆದಿರುವುದು.
Published on

ಕೊಟ್ಟೂರು: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಗಮಿಸುವ ರೋಗಿಗಳು ಮತ್ತು ಬಡ ಜನರಿಗಾಗಿ ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗುತ್ತಿದ್ದರೂ ಕಾಮಗಾರಿ ಮುಗಿಯುತ್ತಿಲ್ಲ. ಕಳೆದ ನಾಲ್ಕು ತಿಂಗಳಿಂದ ಜನರ ಈ ಕುರಿತ ನಿರೀಕ್ಷೆ ಹುಸಿಯಾಗಿದೆ.

ಇಂದಿರಾ ಕ್ಯಾಂಟೀನ್ ಕಟ್ಟಡ ಕಾಮಗಾರಿ ಬಹುತೇಕ ಮುಗಿದಿದೆ. ಆದರೆ, ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಕಟ್ಟಡದ ಸುತ್ತ ಸುತ್ತ ಗಿಡ-ಗಂಟಿ ಬೆಳೆದಿವೆ. ಇಂದಿರಾ ಕ್ಯಾಂಟೀನ್ ನಿರ್ಮಾಣ ಹಾಗೂ ಕಟ್ಟಡದ ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಪಟ್ಟಣ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಬಳಿ ಸಮರ್ಪಕ ಮಾಹಿತಿ ಇಲ್ಲ.

ಕಟ್ಟಡ ಕಾಮಗಾರಿ ಮುಗಿದು ಇಂದಿರಾ ಕ್ಯಾಂಟೀನ್ ಆರಂಭವಾದರೆ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಬಡವರಿಗೆ ಅನುಕೂಲವಾಗಲಿದೆ. ಕಡಿಮೆ ದರದಲ್ಲಿ ಊಟ, ಉಪಹಾರ ಸಿಗಲಿದೆ. ಆದರೆ, ಕ್ಯಾಂಟೀನ್ ನಿರ್ಮಾಣ ನನೆಗುದಿಗೆ ಬಿದ್ದಿದ್ದು, ಈ ಕುರಿತು ಸಂಬಂಧಿಸಿದ ಯಾವುದೇ ಅಧಿಕಾರಿ ಬಳಿ ಸಮರ್ಪಕ ಮಾಹಿತಿ ಇಲ್ಲದಿರುವುದು ಸೋಜಿಗವಾಗಿದೆ.

ಇನ್ನು ಕೆಲ ದಿನಗಳು ಕಳೆದರೆ ಅಪೂರ್ಣಗೊಂಡಿರುವ ಇಂದಿರಾ ಕ್ಯಾಂಟೀನ್ ಕಟ್ಟಡ ನಾಯಿ, ಹಂದಿಗಳ ವಾಸ ಸ್ಥಾನವಾಗಬಹುದು. ಕ್ಯಾಂಟೀನ್ ಕಾಮಗಾರಿ ಆರಂಭವಾಗಿ ಜನರಿಗೆ ಉಪಯೋಗವಾದರೆ ಯೋಜನೆ ಸಾರ್ಥಕವಾಗಲಿದೆ. ಇಲ್ಲದಿದ್ದರೆ ಸರ್ಕಾರದ ಅನುದಾನ ವ್ಯರ್ಥವಾಗಲಿದೆ. ಸಮುದಾಯ ಆರೋಗ್ಯ ಕೇಂದ್ರದ ಬದಲಿಗೆ ಜನದಟ್ಟಣೆ ಇರುವ ಎಪಿಎಂಸಿ, ಬಸ್ ನಿಲ್ದಾಣ, ಉಜ್ಜಿನಿ ಸರ್ಕಲ್‌ನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಿದ್ದರೆ ಜನರಿಗೆ ಹೆಚ್ಚು ಅನುಕೂಲವಾಗುತ್ತಿತ್ತು ಎಂಬ ಅಭಿಪ್ರಾಯಗಳು ಕೂಡ ಇವೆ. ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಿಸುವವರ ಪ್ರತ್ಯೇಕ ತಂಡ ಇದೆಯಂತೆ. ಎಲ್ಲೆಲ್ಲಿ ಕ್ಯಾಂಟೀನ್ ಮಂಜೂರು ಆಗುತ್ತದೆ ಅಲ್ಲಿ ಬಂದು ಕ್ಯಾಂಟೀನ್ ನಿರ್ಮಿಸಿ ಹೋಗುತ್ತಾರಂತೆ. ಈ ತಂಡ ಕೊಟ್ಟೂರಿಗೆ ಬಂದು ಜಿಲ್ಲಾಧಿಕಾರಿ ಆದೇಶವಾಗಿದೆ. ಪಟ್ಟಣದ ಆಸ್ಪತ್ರೆ ಆವರಣದಲ್ಲಿ ಕ್ಯಾಂಟೀನ್ ನಿರ್ಮಿಸುವುದಾಗಿ ಹೇಳಿದರು. ಇತ್ತೀಚಿಗೆ ಜಿಲ್ಲಾಧಿಕಾರಿ ಸಭೆಯಲ್ಲಿ ಕ್ಯಾಂಟೀನ್ ಕಾಮಗಾರಿ ಅಪೂರ್ಣವಾಗಿರುವು ಬಗ್ಗೆ ಮಾಹಿತಿ ನೀಡಲಾಗಿದೆ. ನಸರುಲ್ಲಾ ಪಪಂ ಮುಖ್ಯಾಧಿಕಾರಿ, ಕೊಟ್ಟೂರು ಕೆಲವರು ಬಂದು ಜಿಲ್ಲಾಧಿಕಾರಿ ಆದೇಶವಾಗಿದ್ದು, ಆಸ್ಪತ್ರೆ ಆವರಣದೊಳಗೆ ಇಂದಿರಾ ಕ್ಯಾಂಟೀನ್ ನಿರ್ಮಿಸುವುದಾಗಿ ಹೇಳಿದರು. ನಮ್ಮ ಅನುಮತಿ ಪಡೆದಿಲ್ಲ. ಈ ವಿಷಯವನ್ನು ಜಿಲ್ಲಾ ಆರೋಗ್ಯಾಧಿಕಾರಿ ಗಮನಕ್ಕೆ ತರಲಾಗಿದೆ. ಇಂದಿರಾ ಕ್ಯಾಂಟೀನ್ ನಿರ್ಮಾಣದಿಂದ ರೋಗಿಗಳಿಗೆ, ಬಡ ಜನರಿಗೆ ಅನುಕೂಲವಾಗುತ್ತದೆ ಅಂದುಕೊಂಡಿದ್ದೆವು. ರೋಗಿಗಳು ಮತ್ತು ಆಸ್ಪತ್ರೆಗೆ ಬಂದವರು ಕ್ಯಾಂಟೀನ್ ಯಾವಾಗ ಆರಂಭವಾಗುತ್ತದೆ ಎಂದು ನನ್ನ ಕೇಳುತ್ತಿದ್ದಾರೆ. ಏನೆಂದು ಉತ್ತರಿಸಬೇಕು ಎಂದು ಗೊತ್ತಾಗುತ್ತಿಲ್ಲ. ಡಾ.ಬದ್ಯಾನಾಯ್ಕ ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ, ಕೊಟ್ಟೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net