

ಬೋರಗಾಂವ: ಪಟ್ಟಣಕ್ಕೆ ಇಂದಿರಾ ಕ್ಯಾಂಟೀನ್ ಮಂಜೂರು ಆಗಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಬಿ.ತೋಡಕರ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯಿತಿ ಬಳಿ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಸರ್ಕಾರಿ ಆಸ್ಪತ್ರೆ, ಪಟ್ಟಣ ಪಂಚಾಯಿತಿ ಕಚೇರಿ, ಬ್ಯಾಂಕ್, ಮಾರುಕಟ್ಟೆ, ಸರ್ಕಾರಿ ಮತ್ತು ಅರೆ ಸರ್ಕಾರಿ ಕಚೇರಿ ಇರುವುದರಿಂದ ಈ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲು ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ ಎಂದರು.
ಪಪಂ ಸದಸ್ಯ ಅಭಯಕುಮಾರ ಮಗದುಮ ಮಾತನಾಡಿದರು. ಪಪಂ ಸದಸ್ಯ ತುಳಸಿದಾಸ ವಾಸವಾಡೆ, ಶರದ ಜಂಗಟೆ, ರೋಹಿತ್ ಮಾನೆ, ವರ್ಷಾ ಮನಗುತ್ತೆ, ಶೋಭಾ ಹವಲೆ, ಭಾರತಿ ವಾಸವಾಡೆ, ಅಶ್ವಿನಿ ಪವಾರ, ಸುವರ್ಣ ಸೋಬಾನೆ, ಗಿರಿಜಾ ವಠಾರೆ, ಮಾಣಿಕ ಕುಂಬಾರ, ಪ್ರದೀಪ ಮಾಳಿ, ಸಂಗೀತಾ ಶಿಂಗೆ, ದಿಗಂಬರ ಕಾಂಬಳೆ, ಅಮರ ಶಿಂಗೆ, ರುಕ್ಸಾನಾ ಅಪರಾಜ್, ಜಿತೇಂದ್ರ ಪಾಟೀಲ, ರಮೇಶ ಕುರಳೆ, ಅಮಿತ್ ಮಾಳಿ, ಪ್ರಥಮ ದರ್ಜೆ ಸಹಾಯಕ ರಾಹುಲ ಗುಡಯಿಂಕರ, ದ್ವಿತೀಯ ದರ್ಜೆ ಸಹಾಯಕ ಪೋಪಟ ಕುರಲೇ, ಕಂದಾಯ ನಿರೀಕ್ಷಕ ಸಂದೀಪ ವಾಯಿಂಗಡೆ ಇತರರಿದ್ದರು.