ಇಂದಿರಾ ಕ್ಯಾಂಟೀನ್ ಸದ್ಬಳಕೆಯಾಗಲಿ

14MUDALGI4
Published on

ಮೂಡಲಗಿ: ಅಸಂಘಟಿತ ಕಾರ್ಮಿಕರು, ಜನ ಸಾಮಾನ್ಯರಿಗೆ ಇಂದಿರಾ ಕ್ಯಾಂಟೀನ್ ವರದಾನವಾಗಿದೆ. ಕಡಿಮೆ ದರದಲ್ಲಿ ಉಪಾಹಾರ, ಊಟ ಲಭ್ಯವಿದ್ದು, ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಗುರುವಾರ ಹೊಸದಾಗಿ ಪ್ರಾರಂಭವಾಗಿರುವ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿ, ವಿವಿಧ ಬಗೆಯ ಉಪಾಹಾರ ಕೇವಲ 5 ರೂ. ಮತ್ತು 10 ರೂ.ಗೆ ಊಟ ದೊರೆಯಲಿದ್ದು, ಸಾರ್ವಜನಿಕರಿಗೆ ಉಪಯುಕ್ತವಾಗಲಿದೆ ಎಂದರು.

ಪುರಸಭೆಯಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸನ್ಮಾನಿಸಲಾಯಿತು. ನಂತರ ಇಂದಿರಾ ಕ್ಯಾಂಟೀನ್‌ನಲ್ಲಿ ತಯಾರಿಸಿದ ತಿನಿಸುಗಳನ್ನು ಪರೀಕ್ಷಿಸಿದರು. ಪುರಸಭೆ ಅಧ್ಯೆಕ್ಷೆ ಖುರ್ಷಾದಾ ನದ್ಾ, ಉಪಾಧ್ಯಕ್ಷೆ ಭೀಮವ್ವ ಪೂಜೇರಿ, ಸುಭಾಸ ಢವಳೇಶ್ವರ, ರಾಮಣ್ಣ ಹಂದಿಗುಂದ, ಈರಪ್ಪ ಮುನ್ಯಾಳ, ಆದಂ ತಾಂಬೋಳಿ, ಬಸು ಝಂಡೇಕುರಬರ, ಹುಸೇನಸಾಬ್ ಶೇಖ, ಕಾಶಪ್ಪ ಝಂಡೇಕುರಬರ, ಅಬ್ದುಲಗಾರ್ ಡಾಂಗೆ, ಪ್ರಕಾಶ ಮುಗಳಖೋಡ, ಹನುಮಂತ ಗುಡ್ಲಮನಿ, ಮುಖ್ಯಾಧಿಕಾರಿ ತುಕಾರಾಂ ಮಾದರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net