

ಆನೇಕಲ್ ; ಅತ್ತಿಬೆಲೆಯಲ್ಲಿ ಇಂದಿರಾ ಕ್ಯಾಂಟೀನ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಶಾಸಕ ಬಿ.ಶಿವಣ್ಣ ಇತ್ತೀಚೆಗೆ ಚಾಲನೆ ನೀಡಿದರು.
ಇಂದಿರಾ ಕ್ಯಾಂಟೀನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ತ್ರಿಚಕ್ರ ವಾಹನ ಹಾಗೂ ಪುರಸಭೆಯ ಸಿಬ್ಬಂದಿಗೆ ವಿಮೆಯ ಬಾಂಡ್ಗಳನ್ನು ವಿತರಿಸಲಾಯಿತು. ಸಾರ್ವಜನಿಕರಿಗೆ ಬಿ&ಖಾತೆ ವಿತರಿಸಿ, ಶೌಚಗೃಹ ನಿರ್ಮಾಣಕ್ಕೆ ಅನುದಾನ ನೀಡಲಾಯಿತು.
ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಕಾಂಗ್ರೆಸ್ ಬಡವರ ಪರವಾದ ಸರ್ಕಾರ. ಬಡವರು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಇಂದಿರಾ ಕ್ಯಾಂಟೀನ್ ವರದಾನವಾಗಿದೆ. ಹೊರಗಿನಿಂದ ಬಂದವರಿಗೆ, ಶಾಲಾ&ಕಾಲೇಜು ವಿದ್ಯಾರ್ಥಿಗಳಿಗೆ ಕ್ಯಾಂಟೀನ್ನಲ್ಲಿ ಶುಚಿ ಮತ್ತು ರುಚಿಯಾದ ಆಹಾರ ನೀಡಲಾಗುತ್ತದೆ ಎಂದರು.
ಅತ್ತಿಬೆಯಿಂದ ಪ್ರತಿನಿತ್ಯ ಬೆಳಗ್ಗೆಯಿಂದ ರಾತ್ರಿವರೆಗೆ 3 ಸಾವಿರ ಬಸ್ ಸಂಚರಿಸುತ್ತವೆ. ಆದರೆ ಸುಸಜ್ಜಿತ ಬಸ್ ನಿಲ್ದಾಣವಿಲ್ಲ. ಬಸ್ ನಿಲ್ದಾಣದ ಸಮಸ್ಯೆಯಿಂದಾಗಿ ಎಲ್ಲ ಬಸ್ಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಬೇಕಾಗಿತ್ತು. ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಈಗ ಕೆಎಸ್ಆರ್ಟಿಸಿ ಮತ್ತು ಪುರಸಭೆಯ ಜಾಗದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲು ಕ್ರಮ ವಹಿಸಲಾಗುತ್ತಿದೆ. ಇದರಿಂದಾಗಿ ಅತ್ತಿಬೆಲೆ ಸಾರ್ವಜನಿಕರಿಗೆ ಹೆಚ್ಚು ಉಪಯುಕ್ತವಾಗಲಿದೆ. ಬಸ್ ನಿಲ್ದಾಣದಲ್ಲಿ ಅಂಗಡಿಗಳನ್ನು ನಿರ್ಮಿಸಿ ಪುರಸಭೆಗೆ ಆದಾಯ ಬರುವಂತೆ ಮಾಡಲಾಗುವುದು. ಮುಂಬರುವ ದಿನಗಳಲ್ಲಿ ಸರ್ಜಾಪುರ ಬಸ್ ನಿಲ್ದಾಣ ಮೇಲ್ದರ್ಜೇಗೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಅಲ್ಲದೆ ಆನೇಕಲ್ ತಾಲೂಕಿನ ಎಲ್ಲ ಪ್ರಮುಖ ಬಸ್ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗುವುದು ಎಂದು ಸಚಿವರು ವಿವರಿಸಿದರು.
ಪರಿಸರ ಅಭಿಯಂತ ಯಾಸ್ಮೀನ್ ಸುಲ್ತಾನ್, ಹಿರಿಯ ಆರೋಗ್ಯ ನಿರೀಕಿ ಆರ್.ಶುಭಾ, ವಿಜಯಪ್ಪ, ಹೇಮಂತ್, ಮುಖಂಡರಾದ ದೊಡ್ಡಹಾಗಡೆ ಹರೀಶ್, ವೇಣು, ಲಿಂಗಣ್ಣ, ಚಂದ್ರಪ್ಪ, ರುಪತಿರೆಡ್ಡಿ, ಮೋಹನ್, ಗೋಪಾಲಕೃಷ್ಣ, ರವಿ, ಮಾಲಾ, ಜಯಲ್ಮಮ್ಮ, ಮುರಳಿ, ಸುರೇಶ್, ಕಾಂತಲ್ಮಮ್ಮ, ಅಲ್ಲಾಬಕಾಶ್, ರಮೇಶ್, ರಾಜಲ್ಮಮ್ಮ, ಮಂಜುನಾಥ್ ಇದ್ದರು.
ಶ್ರೀದಲ್ಲಿ ಹೆಬ್ಬಗೋಡಿ, ಚಂದಾಪುರದಲ್ಲೂ ಚಾಲನೆ
ಆನೇಕಲ್ ವಿಧಾನಸಭಾ ೇತ್ರದ ಎಲ್ಲ ಪುರಸಭೆಗಳಲ್ಲಿಯೂ ಇಂದಿರಾ ಕ್ಯಾಂಟೀನ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಆನೇಕಲ್, ಬೊಮ್ಮಸಂದ್ರ, ಹೆಬ್ಬಗೋಡಿಯಲ್ಲಿ ಕ್ಯಾಂಟೀನ್ ನಿರ್ಮಿಸಲಾಗಿದೆ. ಕೈಗಾರಿಕಾ ಪ್ರದೇಶವಾಗಿರುವ ಅತ್ತಿಬೆಲೆಯಲ್ಲಿ ಬಡವರಿಗೆ ಕ್ಯಾಂಟೀನ್ನಿಂದ ಉಪಯುಕ್ತವಾಗಲಿದೆ. ಶ್ರೀದಲ್ಲಿ ಹೆಬ್ಬಗೋಡಿ, ಚಂದಾಪುರ ಪುರಸಭೆ ವ್ಯಾಪ್ತಿಯಲ್ಲಿಯೂ ಕ್ಯಾಂಟೀನ್ ಉದ್ಘಾಟಿಸಲಾಗುವುದು. ಮುಂದಿನ ದಿನಗಳಲ್ಲಿ ಗ್ರಾಪಂಗಳಲ್ಲಿಯೂ ಇಂದಿರಾ ಕ್ಯಾಂಟಿನ್ ನಿರ್ಮಿಸಲು ಆದ್ಯತೆ ನೀಡಲಾಗುವುದು ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು. ಮಲತ್ಯಾಜ್ಯ ನಿರ್ವಹಣಾ ಟಕ 4ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆ, 1.5ಕೋಟಿ ವೆಚ್ಚದಲ್ಲಿ ಕಸ ನಿರ್ವಹಣಾ ಮತ್ತು ವಿಂಗಡನಾ ಟಕದ ಕಾಮಗಾರಿ ಚಾಲನೆಯಲ್ಲಿದೆ. ರಸ್ತೆ ಅಭಿವೃದ್ಧಿಗೆ 2 ಕೋಟಿ ರೂ. ಟೆಂಡರ್ ಕರೆಯಲಾಗಿದೆ ಎಂದರು.
ಕಾನೂನು ತಿಳಿಯದ ಬಿಜೆಪಿ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂದು ಟೀಕೆ ಮಾಡಲಾಗುತ್ತದೆ. ಆದರೆ ಬಿಜೆಪಿ ಮುಖಂಡರಿಗೆ ಕಾನೂನು ಬಗ್ಗೆ ಾನವೇ ಇಲ್ಲ. ಈ ಹಿಂದೆ ಬಿಜೆಪಿ ಅವಧಿಯಲ್ಲಿದ್ದಾಗ ನೈತಿಕ ಪೊಲೀಸ್ಗಿರಿ ಹೆಚ್ಚಾಗಿತ್ತು. ಬಜರಂಗದಳ ಸೇರಿ ಬಿಜೆಪಿ ಅಂಗ ಸಂಟನೆಗಳು ದೌರ್ಜನ್ಯ ಮಾಡುತ್ತಿದ್ದವು. ಈಗ ಅಂತಹ ಪರಿಸ್ಥಿತಿಯಿಲ್ಲ. ಕಾಂಗ್ರೆಸ್ ಅವಧಿಯಲ್ಲಿ ಅಪರಾಧ ಕಡಿಮೆ ಆಗಿವೆ. ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.