ಶಿವಶಂಕರ ಕಾಲನಿಯಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ

shivashankar colony
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಬಡವರ ಸಲುವಾಗಿಯೇ ಇಂದಿರಾ ಕ್ಯಾಂಟೀನ್ ತೆರೆಯಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಿರ್ಲಕ್ಷ್ಯ್ಕೊಳಪಟ್ಟಿದ್ದ ಈ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದೆ. ನಮ್ಮದು ಬಡವರ ಪರ ಸರ್ಕಾರ ಎಂದು ಶಾಸಕ, ಕರ್ನಾಟಕ ಕೊಳೇಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.

ಕಾರವಾರ ರಸ್ತೆ ಶಿವಶಂಕರ ಕಾಲನಿ ಬಳಿ ನಿರ್ವಿುಸಲಾದ ಇಂದಿರಾ ಕ್ಯಾಂಟೀನ್  ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್ ಸ್ಥಗಿತಗೊಳಿಸಲಾಗಿತ್ತು. ಬಡವರೇ ಹೆಚ್ಚು ವಾಸಿಸುವ ಪ್ರದೇಶಗಳಲ್ಲಿ ಕ್ಯಾಂಟೀನ್ ಸ್ಥಾಪಿಸಲಾಗಿದೆ. ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಪಾಲಿಕೆ ಅಧೀಕ್ಷಕ ಇಂಜಿನೀರ್ ಆರ್. ವಿಜಯ್ಕುಮಾರ್, ವಲಯ ಅಧಿಕಾರಿ ಮಲ್ಲಿಕಾರ್ಜುನ ಯಮಪುರೆ, ಕಾರ್ಯನಿರ್ವಾಹಕ ಇಂಜಿನೀಯರ್ ಸಂತೋಷ ಯರಂಗಳಿ, ಮುತವಲ್ಲಿ ಕುತುಬುದ್ದಿನ್ ಹದಲಿ, ಸಂತೋಷ ಪೂಜಾರ್, ಸೈಯದ್ ಸಲೀಂ ಮುಲ್ಲಾ, ಮುಸ್ತಾಕ್ ಮುದಗಲ್, ಸಾದಿಕ್ ನವಲೂರ, ದ್ಯಾಮಣ್ಣ ಡೋಂಗಿ, ಗಣೇಶ ಪೂಜಾರ್, ಪ್ರಕಾಶ ಒಂಟಮನಿ, ರಾಮಣ್ಣ ಪೂಜಾರ, ಸುಭಾಷ ಪೂಜಾರ, ಅಬ್ಬು ಬಿಜಾಪುರ ಸೇರಿ ಅನೇಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net