ಎರಡು ದಿನಗಳಿಂದ ಇಂದಿರಾ ಕ್ಯಾಂಟಿನ್ ಬಂದ್

10-kollegalphoto-3,,,,,,
Published on

ಕೊಳ್ಳೇಗಾಲ: ಕೊಳ್ಳೇಗಾಲ ತಾಲೂಕಿನ ಬ್ರದರ್ ಚರ್ಚ್ ವತ್ತದಲ್ಲಿರುವ ಇಂದಿರಾ ಕ್ಯಾಂಟಿನ್ ಕಳೆದ ಎರಡು ದಿನಗಳಿಂದ ಬಂದ್ ಆಗಿದ್ದು, ಕಡಿಮೆ ದರದಲ್ಲಿ ಹಸಿವು ನೀಗಿಸಿಕೊಳ್ಳಲು ಬರುವ ಕೂಲಿ ಕಾರ್ಮಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗುತ್ತಿಗೆದಾರರಿಗೆ ಬಿಲ್ ಮಂಜೂರು ಮಾಡದಿರುವ ಹಿನ್ನೆಲೆ ಇಂದಿರಾ ಕ್ಯಾಂಟೀನ್‌ಗೆ ಬೀಗ ಹಾಕಲಾಗಿದೆ. ಹಸಿದು ಬಂದವರಿಗೆ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಊಟ ಸಿಗದೆ ತೊಂದರೆ ಆಗಿದೆ.  ದಿನ ನಿತ್ಯ ಪಟ್ಟಣಕ್ಕೆ ಆಗಮಿಸುವ ಗ್ರಾಮೀಣ ಭಾಗದ ಜನರು, ಕೂಲಿ ಕಾರ್ಮಿಕರು, ತರಕಾರಿ ಮಾರಾಟ ಮಾಡುವವರು ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಬಂದ್ ಆಗಿರುವ ಇಂದಿರಾ ಕ್ಯಾಂಟೀನ್ ನೋಡಿ ಹಸಿವಿನಿಂದಲೇ ಹಿಂದಿರುಗುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಪಡೆಯಲು ವಿಜಯವಾಣಿ ಜಿಲ್ಲಾ ನಗರಾಭಿವೃದ್ಧಿ ಯೋಜನಾಧಿಕಾರಿ ಸುಧಾ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರು ಸಿಗಲಿಲ್ಲ.

ಬಡವರಿಗೆ ಕಡಿಮೆ ಬೆಲೆಯಲ್ಲಿ ತಿಂಡಿ, ಊಟ ನೀಡಲು ಕಾಂಗ್ರೆಸ್ ಸರ್ಕಾರದಲ್ಲಿ ಇಂದಿರಾ ಕ್ಯಾಂಟೀನ್ ಅನುಷ್ಠಾನ ಗೊಳಿಸಿತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಪದೇ ಪದೇ ಬಿಲ್ ಪಾವತಿ ಇನ್ನಿತರ ಕಾರಣಗಳಿಂದ ಕ್ಯಾಂಟೀನ್ ಬಂದ್ ಆಗುತ್ತಿರುವುದು ವಿಪರ್ಯಾಸವೇ ಸರಿ ಎಂದು ಸಾರ್ವಜನಿಕರು ಅಕ್ರೋಶ ಹೊರಹಾಕಿದ್ದಾರೆ. ವಿಶೇಷ ಅಂದರೆ 2018ರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಕೊಳ್ಳೇಗಾಲ ಇಂದಿರಾ ಕ್ಯಾಂಟೀನ್‌ಗೆ ಚಾಲನೆ ನೀಡಿದ್ದನು ಸ್ಮರಿಸಬಹುದು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net