

ಚಿಟಗುಪ್ಪ: ನೂತನ ತಾಲೂಕು ಕೇಂದ್ರವಾಗಿರುವ ಚಿಟಗುಪ್ಪ ಪಟ್ಟಣದಲ್ಲಿ ಅಭಿವೃದ್ಧಿಯಾಗಬೇಕಾಗಿದ್ದು, ಸಾರ್ಜನಿಕರಿಗೆ ಅನುಕೂಲವಾಗುವಂತೆ ಎಲ್ಲಾ ತಾಲೂಕು ಕಚೇರಿಗಳನ್ನು ಒಂದಡೆ ಇರುವಂತೆ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ಪ್ರಯತ್ನಿಸುವುದಾಗಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಭರವಸೆ ನೀಡಿದರು.
ಪಟ್ಟಣದ ತಹಸೀಲ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಮಂಗಳವಾರ ನಡೆದ 76ನೇ ಸ್ವತಂತ್ರೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಪೂರ್ವಜ್ಜರ ಹಾಗೂ ಅನೇಕ ಸ್ವತಂತ್ರ ಹೋರಾಟಗಾರ ಹೋರಾಟ, ಪರಿಶ್ರಮದ ಫಲವಾಗಿ ನಮಗೆ ಸ್ವತಂತ್ರ ಲಭಿಸಿದೆ.
ಪ್ರತಿಯೋಬ್ಬ ಭಾರತೀಯ ಸ್ವತಂತ್ರ ಹೋರಾಟಗಾರರನ್ನು ಸ್ಮರಿಸಬೇಕೆಂದರು. ಚಿಟಗುಪ್ಪ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ಪಕ್ಷ ಭೇಧ ಮರೆತು ಸಹಕಾರ ಒದಗಿಸಿ ಎಂದರು.
ಧ್ವಜಾರೋಹಣ ನೆರವೇರಿಸಿ ತಹಸೀಲ್ದಾರ ರವಿಂದ್ರ ದಾಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಪಂಚಾಯತ ಇಓ ಅಕ್ರಂ ಪಾಶ್, ಸಿಪಿಐ ಮಹೇಶ ಗೌಡ್, ಪುರಸಭೆ ಮುಖ್ಯಾಧಿಕಾರಿ ಹುಸಾಮೋದ್ದಿನ್ ಬಾಬಾ ಸೇರಿದಂತೆ ಪುರಸಭೆ ಸದಸ್ಯರು, ಗಣ್ಯರು, ಸಾರ್ವಜನಿಕರು
ಉಪಸ್ಥಿತರಿದ್ದರು.