ಸ್ವದೇಶಿ ವಸ್ತು ಬಳಕೆಗೆ ಮುಂದಾಗಿ

15RAM-2-Web
ರಾಮದುರ್ಗ ಪಟ್ಟಣದಲ್ಲಿ ಸಂಗೊಳ್ಳಿ ರಾಯಣ್ಣನ ಕಂಚಿನ ಪ್ರತಿಮೆಯನ್ನು ಶಾಸಕ ಮಹಾದೇವಪ್ಪ ಯಾದವಾಡ ಶನಿವಾರ ಅನಾವರಣಗೊಳಿಸಿದರು.
Published on

ರಾಮದುರ್ಗ: ಭಾರತೀಯರು ವಿದೇಶಿ ವಸ್ತುಗಳನ್ನು ಖರೀದಿ ಮಾಡದೇ ಸ್ವದೇಶಿ ವಸ್ತುಗಳ ಖರೀದಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದ್ದಾರೆ.

ಪಟ್ಟಣದ ತೇರ ಬಜಾರ್‌ನಲ್ಲಿ ಶನಿವಾರ 74 ನೇ ಸ್ವಾತಂತ್ರೃ ದಿನಾಚರಣೆ ಅಂಗವಾಗಿ ಸಾರ್ವಜನಿಕ ಧ್ವಜಾ ರೋಹಣ ನೆರವೇರಿಸಿ ಅವರು ಮಾತನಾಡಿದರು.
ಪ್ರತಿಮೆ ಅನಾವರಣ: ಪಟ್ಟಣದ ತುರನೂರ ಹಾಗೂ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ಸರ್ಕಲ್‌ನಲ್ಲಿ ತಾಲೂಕು ಕುರುಬ ಸಮುದಾಯದ ನೇತೃತ್ವದಲ್ಲಿ ನಿರ್ಮಿಸಿದ ಸಂಗೊಳ್ಳಿ ರಾಯಣ್ಣನ ಕಂಚಿನ ಪ್ರತಿಮೆಯನ್ನು ಶಾಸಕ ಮಹಾದೇವಪ್ಪ ಯಾದವಾಡ ಲೋಕಾರ್ಪಣೆಗೊಳಿಸಿದರು.

ತಹಸೀಲ್ದಾರ್ ಗಿರೀಶ ಸ್ವಾಧಿ, ಎಪಿಎಂಸಿ ಅಧ್ಯಕ್ಷ ದ್ಯಾವಪ್ಪ ಬೆಳವಡಿ, ಜಿಪಂ ಸದಸ್ಯ ರೇಣಪ್ಪ ಸೋಮಗೊಂಡ, ಶಿವಕ್ಕ ಬೆಳವಡಿ, ತಾಪಂ ಇಒ ಮುರುಳಿಧರ ದೇಶಪಾಂಡೆ, ಡಿವೈಎಸ್‌ಪಿ ಶಂಕರಗೌಡ ಪಾಟೀಲ, ಲಖನ ಮಸಗುಪ್ಪಿ, ಪಿ.ಡಿ. ಕಾಲವಾಡ, ಜಿ.ಐ.ಹಕಾಟಿ, ಆನಂದ ಜೋಶಿ, ಕೆ.ಮುಕುಡಪ್ಪ, ಚಿಕ್ಕರೇವಣ್ಣನವರ, ವಿಠ್ಠಲ ಜಟಗಣ್ಣವರ, ಲಕ್ಕಪ್ಪ ಕ್ವಾರಿ, ಚಿನ್ಮಯಿ ಶ್ರೀ, ವೇಣು ಮೈಲಾರಿ, ಮಾರುತಿ ತುಪ್ಪದ, ಶಿವಕ್ಕ ಬೆಳವಡಿ, ಎಪಿಎಂಸಿ ಅಧ್ಯಕ್ಷ ದ್ಯಾವಪ್ಪ ಬೆಳವಡಿ, ಮಲ್ಲಣ್ಣ ಯಾದವಾಡ, ಫಕೀರಪ್ಪ ಕೊಂಗವಾಡ ಇತರರು ಇದ್ದರು.

ಗೋಕಾಕ ವರದಿ: ಅಹಿಂಸಾತ್ಮಕ ಹೋರಾಟದ ಮೂಲಕ ಭಾರತೀಯರು ಗಳಿಸಿದ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದೆ ಎಂದು ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಹೇಳಿದ್ದಾರೆ.

ನಗರದ ವಾಲ್ಷ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕಾಡಳಿತದಿಂದ ಹಮ್ಮಿಕೊಂಡಿದ್ದ ಸ್ವಾತಂತ್ರೃ ದಿನ ಆಚರಣೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದ್ದು, ಆಕ್ಸಿಜನ್ ಸೌಲಭ್ಯಯುಳ್ಳ 50 ಹಾಸಿಗೆ ಸಹಿತವಾಗಿ 360 ಹಾಸಿಗೆಗಳು ಲಭ್ಯವಿವೆ. ಸೋಂಕಿತರಿಗೆ ಮಾರ್ಗಸೂಚಿ ಪ್ರಕಾರ ವೈದ್ಯಕೀಯ ಸೇವೆ ನೀಡಲಾಗುತ್ತಿದೆ ಎಂದರು. ನಂತರ ಕರೊನಾ ಸೇನಾನಿಗಳು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ತಾಪಂ ಅಧ್ಯಕ್ಷೆ ಸುನಂದಾ ಕರದೇಸಾಯಿ, ಉಪಾಧ್ಯಕ್ಷ ಯಲ್ಲಪ್ಪ ನಾಯಿಕ, ಸೋಮಶೇಖರ ಮಗದುಮ್ಮ, ತಾಪಂ ಇಒ ಬಸವರಾಜ ಹೆಗ್ಗನಾಯಕ, ಪೌರಾಯುಕ್ತ ಶಿವಾನಂದ ಹಿರೇಮಠ, ಸಿಪಿಐ ಗೋಪಾಲ ರಾಠೋಡ, ತಾಲೂಕು ವೈದ್ಯಾಧಿಕಾರಿ ಜಗದೀಶ ಜಿಂಗಿ, ಡಾ.ಮಹೇಶ ಕೋಣಿ, ಬಿಇಒ ಜಿ.ಬಿ.ಬಳಗಾರ, ಕೆ.ಎನ್.ವಣ್ಣೂರ ಇದ್ದರು.

ಕಕ್ಕೇರಿ ವರದಿ: ಗ್ರಾಮದಲ್ಲಿ ಸ್ವಾತಂತ್ರೃ ದಿನ ಆಚರಿಸಲಾ ಯಿತು. ಪಿಡಿಒ ಸಂಜೀವ ಬೊಂಗಾಳೆ ಧ್ವಜಾರೋಹಣ ನೆರವೇರಿಸಿದರು. ಗ್ರಾಮ ಲೆಕ್ಕಾಧಿಕಾರಿ ಲೋಕೇಶ, ಗ್ರಾಪಂ ಉಪಾಧ್ಯಕ್ಷೆ ಮೀನಾಕ್ಷಿ ಕೇಮನ್‌ವವರ, ಸಿ.ಬಿ.ಅಂಬೋಜಿ, ಅದೃಶ ಹಂಚಿನಮನಿ ಸೂರ್ಯಕಾಂತ ಇತರರು ಇದ್ದರು.

ಬೆಟಗೇರಿ ವರದಿ: ಗ್ರಾಪಂ ಕಾರ್ಯಾಲಯದಲ್ಲಿ ಸ್ವಾತಂತ್ರೃ ದಿನ ಆಚರಿಸಲಾಯಿತು. ಈಶ್ವರ ಬಳಿಗಾರ, ಲಕ್ಷ್ಮಣ ಚಂದರಗಿ, ಪರಶುರಾಮ ಇಟಗೌಡ್ರ, ಗೌಡಪ್ಪ ಮಾಳೇದ, ಸುರೇಶ ಬಾಣಸಿ, ಪಿಡಿಒ ಎಚ್.ಎನ್.ಬಾವಿಕಟ್ಟಿ ಇದ್ದರು.

ಹಳ್ಳೂರ ವರದಿ: ಗ್ರಾಮದ ವಿವಿಧ ಸಹಕಾರಿ, ಸರ್ಕಾರಿ ಸಂಸ್ಥೆಗಳ ಆವರಣದಲ್ಲಿ ಸ್ವಾತಂತ್ರೃ ದಿನ ಆಚರಿಸಲಾಯಿತು. ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಕುಮಾರ ಲೋಕಣ್ಣವರ, ಹನುಮಂತ ತೇರದಾಳ, ಸುರೇಶ ಕತ್ತಿ, ಮಲ್ಲಪ್ಪ ಛಬ್ಬಿ, ತಾಪಂ ಸದಸ್ಯೆ ಸವಿತಾ ಡಬ್ಬಣ್ಣವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net