

ಕೋಟ: ಮಣೂರು ಪಡುಕರೆ ಇಂಡಿಕಾ ಕಲಾ ಬಳಗದ ಇಂಡಿಕಾ ಸಂಭ್ರಮ-2025ರ ಪೋಸ್ಟರನ್ನು ಕೋಟ ಅಮೃತೇಶ್ವರಿ ದೇಗುಲದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ.ಕುಂದರ್ ಬುಧವಾರ ಬಿಡುಗಡೆಗೊಳಿಸಿದರು.
ಟ್ರಸ್ಟಿ ಶಿವ ಪೂಜಾರಿ, ಸುಭಾಷ್ ಶೆಟ್ಟಿ, ಕೋಟ ಗ್ರಾಪಂ ಎಸ್‌ಎಲ್‌ಆರ್‌ಎಂ ಘಟಕ ಮುಖ್ಯಸ್ಥೆ ಭವ್ಯಾ, ವಕೀಲ ಟಿ.ಮಂಜುನಾಥ್ ಗಿಳಿಯಾರ್, ಸಾಮಾಜಿಕ ಕಾರ್ಯಕರ್ತ ನಾಗರಾಜ್ ಗಾಣಿಗ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಇಂಡಿಕಾ ಕಲಾ ಬಳಗದ ಪ್ರಭಾಕರ್ ಮಣೂರು ಉಪಸ್ಥಿತರಿದ್ದರು. ಇಂಡಿಕಾ ಕಲಾ ಬಳಗ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ ಪ್ರಸ್ತಾವನೆ ಸಲ್ಲಿಸಿದರು. ಚಂದ್ರ ಆಚಾರ್ ನಿರೂಪಿಸಿದರು. ಸಂಚಾಲಕ ಸಂತೋಷ್ ಕುಮಾರ್ ಕೋಟ ವಂದಿಸಿದರು.