ಭಾರತದ ಸಂವಿಧಾನ ವಿಶ್ವದಲ್ಲೇ ದೊಡ್ಡದು

28ckd4
Published on

ಚಿಕ್ಕೋಡಿ: ಭಾರತದ ಸಂವಿಧಾನ ವಿಶ್ವದಲ್ಲೇ ದೊಡ್ಡ ಸಂವಿಧಾನವಾಗಿದ್ದು, ಭಾರತಿಯರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಅಂಕಲಿ ಕೆಎಲ್‌ಇ ಸಂಸ್ಥೆ ಪದವಿ ಮಹಾವಿದ್ಯಾಲಯದ ಪ್ರೊ.ಎ.ಕೆ.ಪಾಟೀಲ ಹೇಳಿದರು.

ಪಟ್ಟಣದ ಕೆಎಲ್‌ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಸೂಕ್ತ ಆಡಳಿತ ವ್ಯವಸ್ಥೆ ಹಾಗೂ ಎಲ್ಲ ವರ್ಗದ ಜನರು ಉತ್ತಮ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದರು. ಪ್ರಾಚಾರ್ಯ ಡಾ.ಡಿ.ಬಿ.ಸೊಲಾಪುರೆ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ದೀಪಾಲಿ ಪಾಟೀಲ, ಮೇಘಾ ಶೆಟ್ಟಿ ಇತರರಿದ್ದರು. ಪ್ರತಿಷ್ಟಾ ಶೆಟ್ಟಿ ಹಾಗೂ ಪಿ.ಎಂ.ಕಮತೆ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net