ಭಾರತೀಯರು ಪ್ರಕೃತಿಯಲ್ಲಿ ದೇವರ ಕಂಡವರು

4
ಖಾನಟ್ಟಿಯ ಶಿವಲಿಂಗೇಶ್ವರ ದೇವಸ್ಥಾನದ ಮಹಾದ್ವಾರದ ಉದ್ಘಾಟನೆ ಸಮಾರೋಪ ಸಮಾರಂಭಕ್ಕೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಚಾಲನೆ ನೀಡಿದರು. ಶಿವಾನಂದ ಸ್ವಾಮೀಜಿ, ಶಿವನಪ್ಪ ತುಪ್ಪದ, ಉಪಾಧ್ಯಕ್ಷ ಚೇತನ ರಡ್ಡೆರಟ್ಟಿ ಇತರರಿದ್ದರು.
Published on

ಮೂಡಲಗಿ: ಭಾರತದ ಅಧ್ಯಾತ್ಮ ಮತ್ತು ಭಕ್ತಿ ಪರಂಪರೆ ವಿಶ್ವವೇ ಹೆಮ್ಮೆ ಪಡುವಂತಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ತಾಲೂಕಿನ ಖಾನಟ್ಟಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಿವಲಿಂಗೇಶ್ವರ ದೇವಸ್ಥಾನದ 1.50 ಕೋಟಿ ರೂ ವೆಚ್ಚದ ಮಹಾದ್ವಾರದ ಉದ್ಘಾಟನೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಭಾರತೀಯರು ಪ್ರಕೃತಿಯಲ್ಲಿ ದೇವರನ್ನು ಕಂಡುಕೊಂಡಿರುವ ದೈವಭಕ್ತರು ಎಂದರು.
ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನ ನಿರ್ಮಾಣಕ್ಕೆ ರಾಜ್ಯಸಭಾ ಸದಸ್ಯರ ಸ್ಥಳೀಯ ಪ್ರದೇಶ ಅಭಿವದ್ಧಿ ಯೋಜನೆ ಅಡಿಯಲ್ಲಿ 110ಲಕ್ಷ ನೀಡುತ್ತೇನೆ ಎಂದು ಭರವಸೆ ನೀಡಿದರು.

ಬಾಲಶೇಖರ ಬಂದಿ ಮಾತನಾಡಿ, ಗ್ರಾಮದ ಸೌಹಾರ್ದತೆ, ಒಗ್ಗಟ್ಟು ಮಾದರಿಯಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಸುಣಧೋಳಿ ಶಿವಾನಂದ ಸ್ವಾಮೀಜಿ ಮಾತನಾಡಿ, ನಿಸ್ವಾರ್ಥದಿಂದ ಮಾಡುವ ದಾನವು ನಿಜವಾದ ದಾನವಾಗಿದೆ. ಎಂದರು. ಗಣ್ಯರನ್ನು ಸನ್ಮಾನಿಸಲಾಯಿತು. ಶಿವನಪ್ಪ ತುಪ್ಪದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚೇತನ ರಡ್ಡೆರಟ್ಟಿ, ಎಸ್.ಬಿ. ಗುದಗನ್ನವರ, ಶ್ರುತಿ ಜಾಧವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net