ಇಂಡಿಯಾನಾ ಆಸ್ಪತ್ರೆ ಹೋಮ್ ಕೇರ್ ಸೇವೆ ಆರಂಭ

mng- june 20- Indiana Homecare
ಮಂಗಳೂರಿನ ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್ಸಿಟ್ಯೂಟ್ ಸಹಭಾಗಿತ್ವದಲ್ಲಿ ಆರಂಭಿಸುತ್ತಿರುವ ಹೋಮ್ ಕೇರ್ ಸೇವೆ ಯ ಲಾಂಛನದ ಬಿಡುಗಡೆ ಮಂಗಳೂರು ಪತ್ರಿಕಾ ಭವನದಲ್ಲಿ ಗುರುವಾರ ನಡೆಯಿತು. ಇಂಡಿಯಾನಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಯೂಸ್ು ಕುಂಬ್ಳೆ, ಕ್ರಿಟಿಕಲ್ ಕೇರ್ ಯುನಿೈಡ್‌ನ ಉಪಾಧ್ಯಕ್ಷ ಹಾಗೂ ಬಿಸಿನೆಸ್ ಹೆಡ್ ರವಿಶಂಕರ್ ಉಪಾಧ್ಯಾಯ, ಇಂಡಿಯಾನಾ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ. ಅಪೂರ್ವ ಶ್ರೀ ಜಯದೇವ್, ಸಿಇಓ ವಿಜಯ್ ಉಪಸ್ಥಿತರಿದ್ದರು.
Published on

ಮಂಗಳೂರು: ವಿವಿಧ ಪ್ರಯೋಜನಗಳನ್ನು ಹೊಂದಿರುವ ವೃತ್ತಿಪರ ಅರೈಕೆ- ಮನೆ ಸೇವೆಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್ಸಿಟ್ಯೂಟ್ ಸಹಭಾಗಿತ್ವದಲ್ಲಿ ಹೋಮ್ ಕೇರ್ ಸೇವೆ ಆರಂಭಿಸಲು ಮುಂದಾಗಿದೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂಡಿಯಾನಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಯೂಸ್ು ಕುಂಬ್ಳೆ ಅವರು, ದೇಶದ ಮುಖ್ಯ ಹೋಮ್ ಹೆಲೇರ್ ಕಂಪನಿಯಾದ ಕ್ರಿಟಿಕಲ್ ಕೇರ್ ಯುನಿೈಡ್(ಸಿಸಿಯು) ನಿಂದ ಚಾಲಿತವಾದ ಇಂಡಿಯಾನಾ ಹೋಮ್ ಕೇರ್ ಸರ್ವೀಸಸ್ ಉತ್ತಮ ಆರೋಗ್ಯ ಸೇವೆಗಳನ್ನು ಮನೆಗೆ ತರುವ ಗುರಿ ಹೊಂದಿದೆ. ಈ ವ್ಯವಸ್ಥೆ ಮನೆಯಲ್ಲೇ ಐಸಿಯು, ಕ್ಯಾನ್ಸರ್, ಹೃದಯ ಮತ್ತು ಪಾರ್ಶ್ವವಾಯು ಆರೈಕೆ, ಆಮ್ಲಜನಕ ಮತ್ತು ವೈದ್ಯಕೀಯ ಉಪಕರಣ ಸೇವೆಯನ್ನು ಒಳಗೊಂಡಿದೆ. ಇದು ಆಸ್ಪತ್ರೆಗಳಲ್ಲಿ ದೀರ್ಘ ವಾಸ್ತವ್ಯದ ಅಗತ್ಯವನ್ನು ನಿವಾರಿಸುತ್ತದೆ ಮತ್ತು ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದರು.
ಇದು ರೋಗಿಯ ಅಗತ್ಯತೆಗಳಿಗೆ ಸಮಗ್ರ, ಪರಿಪೂರ್ಣವಾದ ಪರಿಹಾರವನ್ನು ಒದಗಿಸುತ್ತದೆ. ಉಪಕರಣಗಳಿಂದ ಹಿಡಿದು ಬಳಕೆಯ ವಸ್ತುಗಳು, ವೈದ್ಯರು, ದಾದಿಯರು, ಪರಿಚಾರಕರು, ಫಿಸಿಯೋಥೆರಪಿಸ್ಟ್‌ಗಳು, ಪ್ರಯೋಗಾಲಯ ಮತ್ತು ವಿಕಿರಣಶಾಸೀಯ ಪರೀಕ್ಷೆಗಳು ಮತ್ತು ಇತರ ವಿಶೇಷ ಅಗತ್ಯಗಳು ನೀಡಲು ಯೋಜನೆ ರೂಪಿಸಲಾಗಿದೆ ಎಂದರು.
ವಿಶೇಷವಾಗಿ ವಯಸ್ಸಾದವರು ಮತ್ತು ನಿಶ್ಚಲ ರೋಗಿಗಳಿಗೆ ಭಾರತದಲ್ಲಿ ಅನಗತ್ಯ ಆಸ್ಪತ್ರೆ ಭೇಟಿಗಳನ್ನು ಶೇ.65ರ ವರೆಗೆ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಆಸ್ಪತ್ರೆಯ ವೆಚ್ಚವನ್ನು ಕಡಿಮೆ ಮಾಡುತ್ತದೆ. ಇಂಡಿಯಾನಾ ಆಸ್ಪತ್ರೆಯ ಹೋಮ್ ಕೇರ್ ಸೇವೆಗಳು, ಸಿಸಿಯು ಸಹಯೋಗದೊಂದಿಗೆ ಈ ಪ್ರದೇಶ ಮತ್ತು ಉತ್ತರ ಕೇರಳದ ಜನರಿಗೆ ವರದಾನವಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕ್ರಿಟಿಕಲ್ ಕೇರ್ ಯುನಿೈಡ್‌ನ ಉಪಾಧ್ಯಕ್ಷ ಹಾಗೂ ಬಿಸಿನೆಸ್ ಹೆಡ್ ರವಿಶಂಕರ್ ಉಪಾಧ್ಯಾಯ, ಇಂಡಿಯಾನಾ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ. ಅಪೂರ್ವ ಶ್ರೀ ಜಯದೇವ್, ಸಿಇಓ ವಿಜಯ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net