ಇತಿಹಾಸ ತಿರುಚುವಿಕೆ ಪರಂಪರೆಗೆ ಅಪಮಾನ

udp-27-vikram sampath
Published on

ಉಡುಪಿ: ಇತಿಹಾಸ ರಾಷ್ಟ್ರದ ಕನ್ನಡಿ ಇದ್ದಂತೆ. ಐತಿಹಾಸಿಕ ಪುರಾವೆಗಳಿಂದ ಜನಾಂಗವನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಒಡೆದ ಕನ್ನಡಿಯಲ್ಲಿ ಮುಖ ವಿಕೃತವಾಗಿ ಕಾಣುವಂತೆ ಇತಿಹಾಸವನ್ನು ವಿಕೃತವಾಗಿ ಚಿತ್ರಿಸುವುದು ಪರಂಪರೆಗೆ ಮಾಡಿದ ಅಪಮಾನ ಎಂದು ಇತಿಹಾಸತಜ್ಞ ಡಾ. ವಿಕ್ರಂ ಸಂಪತ್​ ಹೇಳಿದರು.

ಪುರಭವನದಲ್ಲಿ ದಿ. ಡಾ. ಪಾದೂರು ಗುರುರಾಜ ಭಟ್​ ಜನ್ಮಶತಮಾನೋತ್ಸವ ಅಂಗವಾಗಿ ಡಾ. ಪಾದೂರು ಗುರುರಾಜ ಭಟ್​ ಸ್ಮಾರಕ ಟ್ರಸ್ಟ್​ ವತಿಯಿಂದ ನಡೆದ ಭಾರತೀಯ ದೇವಾಲಯಗಳು ಮತ್ತು ಪರಂಪರೆ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಭಾರತದ ಇತಿಹಾಸ ದೆಹಲಿ ಕೇಂದ್ರಿತವಾಗಿದೆ. 600 ವರ್ಷದ ಇತಿಹಾಸವಿರುವ ಮೈಸೂರು ಸಂಸ್ಥಾನದ ಬಗ್ಗೆಯೇ ಪಾಠಗಳಲ್ಲಿ ಪೂರ್ಣಪ್ರಮಾಣದ ಮಾಹಿತಿಗಳಿಲ್ಲ. ಆಂಗ್ಲರು ಭಾರತಕ್ಕೆ ಬರುವ ಹಿಂದೆಯೇ ನಮ್ಮಲ್ಲಿ ರಾಷ್ಟ್ರೀಯತೆಯ ಕಲ್ಪನೆ ಇತ್ತು. ಆದಿ ಶಂಕರಾಚಾರ್ಯರು ಸಾವಿರ ವರ್ಷದ ಹಿಂದೆಯೇ ದೇಶದ ನಾಲ್ಕು ದಿಕ್ಕುಗಳಲ್ಲಿ ಶಕ್ತೀಪಿಠ ಹಾಗೂ ಕಶ್ಮೀರದಲ್ಲಿ ಶಕ್ತೀಪಿಠವನ್ನು ಸ್ಥಾಪಿಸಿದ್ದರು. ಈ ಸಂದರ್ಭದಲ್ಲಿ ಅವರಿಗೆ ಯಾರು ವೀಸಾವನ್ನು ಕೇಳಿಲ್ಲ. ಗುಜರಾತ್​, ಕರ್ನಾಟಕದ ಅನೇಕ ರಾಜರು ಕಾಶಿ ವಿಶ್ವನಾಥ ಮಂದಿರಕ್ಕೆ ದತ್ತಿ ನೀಡಿರುವುದು ಇತಿಹಾಸದಿಂದ ಕಂಡುಬರುತ್ತದೆ. ಆದರೆ ಮಾಕ್ಸಿಸ್ಟ್​ವಾದಿಗಳು ಬ್ರೀಟಿಷರು ಭಾರತವನ್ನು ಒಂದುಗೂಡಿಸಿದರು ಎಂಬ ತಪು$್ಪ ಕಲ್ಪನೆಯನ್ನು ಬಿತ್ತಿದ್ದಾರೆ ಎಂದರು.

ದಾಳಿಕೋರರ ವಿಜೃಂಭಣೆ

ಸ್ವಾತಂತ್ರೊ$್ಯತ್ಸರ ಭಾರತದ ಇತಿಹಾಸದ ಪುಸ್ತಕಗಳಲ್ಲಿ ವಿದೇಶಿ ದಾಳಿಕೋರರನ್ನು ವಿಜೃಂಭಿಸಲಾಗಿದೆ. ಕ್ರಿ.ಶ. 712ನೇ ಶತಮಾನದಿಂದ ಕ್ರಿ.ಶ. 1,212ರವರೆಗೆ ಸುಮಾರು 500 ವರ್ಷ ಕಾಲ ಅರಬ್​ ದಾಳಿಕೋರರನ್ನು ಸಿಂಧ್​ ಪ್ರಾಂತ್ಯದಲ್ಲಿ ಪರಾಕ್ರಮಿ ರಾಜರು ಹಿಮ್ಮೆಟ್ಟಿಸಿದ್ದರು. ಈ ರಾಜರ ಪೌರುಷದ ಬಗ್ಗೆ ಯಾವುದೇ ಪುಸ್ತಕಗಳಲ್ಲಿ ಉಲ್ಲೇಖಗಳಿಲ್ಲ. ದೇಶದ ಕ್ಷಾತ್ರ ಪರಂಪರೆಯನ್ನು ಮುಚ್ಚಿಟ್ಟು ಭಾರತೀಯರು ವಿದೇಶಿಗರ ಕೈಯಿಂದ ಸೋತವರು ಎಂಬ ಮನೋಭಾವವನ್ನು ಬಿತ್ತಲು ವ್ಯವಸ್ಥಿತವಾಗಿ ಪ್ರಯತ್ನಿಸಲಾಗಿದೆ ಎಂದರು.

ಮೈನಿಂಗ್​ ಮಾಫಿಯಾದಿಂದ ದೇವಸ್ಥಾನಕ್ಕೆ ಅಪಾಯ

ಮಧ್ಯಪ್ರದೇಶದ ಮೊರೆನಾದಲ್ಲಿ ಐತಿಹಾಸಿಕ ಬಟೇಶ್ವರ್​ ದೇವಸ್ಥಾನದ ಪುನರ್ನಿಮಾರ್ಣದ ಬಗ್ಗೆ ಪ್ರಾತ್ಯಕೆ ನೀಡಿದ ಇತಿಹಾಸ ತಜ್ಞ ಕೆ.ಕೆ ಮಹಮ್ಮದ್​, ಚಂಬಲ್​ ಕಣಿವೆಯಲ್ಲಿ ಡಕಾಯಿತರ ಸಹಕಾರದೊಂದಿಗೆ ಪುರಾತತ್ವ ಇಲಾಖೆಯಿಂದ ದೇವಸ್ಥಾನವನ್ನು ಪುನರುತ್ಥಾನಗೊಳಿಸಿದ್ದರೂ ಅಂದಿನ ಬಿಜೆಪಿ ಸರ್ಕಾರ ಗಣಿ ಮಾಫಿಯಾ ವಿರುದ್ಧ ಯಾವುದೇ ಕ್ರಮಕೈಗೊಳ್ಳಲಿಲ್ಲ. ನಂತರ ದೇವಸ್ಥಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಂದಿನ ಆರ್​ಎಸ್​ಎಸ್​ ಮುಖ್ಯಸ್ಥರಿಗೆ ಪತ್ರ ಬರೆದು ವಿನಂತಿಸಬೇಕಾಯಿತು. ಸರ್ಕಾರ ತಕ್ಷಣಕ್ಕೆ ಕ್ರಮಕೈಗೊಂಡರೂ ಇಂದಿಗೂ ಈ ಭಾಗದಲ್ಲಿ ಗಣಿಮಾಫಿಯಾಕ್ಕೆ ಕಡಿವಾಣ ಬಿದ್ದಿಲ್ಲ. ಇದರಿಂದ ದೇವಸ್ಥಾನ ಕುಸಿಯುವ ಭೀತಿ ಎದುರಿಸುತ್ತಿದೆ ಎಂದರು.

ದೇವಾಲಯಗಳ ವಾಸ್ತುವಿನ್ಯಾಸ, ರಚನೆ ಮತ್ತು ಅಲಂಕಾರಿಕ ಕೆತ್ತನೆ, ಪ್ರಾಚಿನ ಭಾರತೀಯರ ನೈಪುಣ್ಯ ಕೌಶಲ್ಯ ಮತ್ತು ವಿಜ್ಞಾನ ಹಾಗು ಸೌಂದರ್ಯ ವಿಷಯದ ಬಗ್ಗೆ ಇತಿಹಾಸ ತಜ್ಞ ಸುರೇಂದ್ರನಾಥ್​ ಬೊಪ್ಪರಾಜು ಮಾತನಾಡಿದರು. ವೇದಿಕೆಯಲ್ಲಿ ಗುರುರಾಜ್​ ಭಟ್​ ಅವರ ಶಿಷ್ಯೆ ಡಾ.ಮಾಲತಿ ಕೃಷ್ಣಮೂರ್ತಿ, ಮಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಶ್ರೀಪತಿ ತಂತ್ರಿ ಉಪಸ್ಥಿತರಿದ್ದರು. ವಿಶ್ವನಾಥ್​ ಪಾದೂರು ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net