ಅಮೆರಿಕದಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಾರತೀಯ ವಿದ್ಯಾರ್ಥಿಗಳು

coronavirus-covid-19-sars-cov-2-social-distancing-600x400
Published on

ಮಂಗಳೂರು: ಅಮೆರಿಕ ಅರಿಝೆೊನಾದ ಫೀನಿಕ್ಸ್ ನಗರದ ಮೆಸಾದಲ್ಲಿ ಸಿಎಇ-ಫೀನಿಕ್ಸ್ ಏವಿಯೇಶನ್ ಅಕಾಡೆಮಿಯಲ್ಲಿ ಇಂಡಿಗೊ ಏರ್​ಲೈನ್ಸ್​ನ ಕಮಶಿಯಲ್ ಪೈಲಟ್ ಲೈಸೆನ್ಸ್(ಸಿಪಿಎಲ್) ತರಬೇತಿ ಪಡೆಯುತ್ತಿರುವ ಭಾರತೀಯ ವಿದ್ಯಾರ್ಥಿಗಳು ಕೋವಿಡ್-19ನಿಂದ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ತರಬೇತಿ ಪಡೆಯುತ್ತಿರುವ 350 ಮಂದಿಯಲ್ಲಿ ಮಂಗಳೂರು ಹಾಗೂ ಬೆಂಗಳೂರಿನ ತಲಾ ಓರ್ವರು ಸಹಿತ 150 ಭಾರತೀಯ ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳು ಇರುವ ಸ್ಥಳದಲ್ಲಿ ಸುರಕ್ಷೆ ಇಲ್ಲದಿರುವುದರಿಂದ ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಭಾರತಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡುವಂತೆ ಅವರ ಪಾಲಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಕರೊನಾ ಸೋಂಕು ತೀವ್ರಗತಿ: ಕರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಪೂರ್ಣ ಲಾಕ್​ಡೌನ್ ಘೊಷಿಸಿದರೆ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಮತ್ತು ವಾಸ್ತವ್ಯಕ್ಕೂ ಕುತ್ತು ಬರಲಿದೆ ಎಂದು ಮಂಗಳೂರಿನಲ್ಲಿ ಉದ್ಯಮಿಯಾಗಿರುವ ಪಂಜಾಬ್ ಮೂಲದ ಬಲ್ವಿಂದರ್ ಸಿಂಗ್ ವಿರ್ದಿ ಪ್ರತಿಕ್ರಿಯಿಸಿದ್ದಾರೆ. ಪೈಲಟ್ ಕಲಿಕೆಯ ವಿದ್ಯಾರ್ಥಿಗಳ ಆರೋಗ್ಯ ಕುರಿತು ಸಂಸ್ಥೆ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಮಾಸ್ಕ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸೇಶನ್ ಸಹಿತ ಯಾವುದೇ ಸೌಲಭ್ಯವನ್ನು ಸಂಸ್ಥೆ ಒದಗಿಸಿಲ್ಲ. ವಿವಿಧ ರಾಷ್ಟ್ರಗಳು ತರಬೇತಿ ಸ್ಥಳದಲ್ಲಿ ಇರುವುದರಿಂದ ಕರೊನಾ ಸೋಂಕು ಹರಡಲು ಅವಕಾಶವಿದೆ ಎನ್ನುವುದು ಪಾಲಕರ ಆತಂಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net